ಶೋಭಾ ವಿರುದ್ಧ ಸಚಿವ ಮಧ್ವರಾಜ್ ಕಿಡಿ

Minister Madhavaraj v/s shobha karandlaje

15-12-2017

ಉಡುಪಿ: ಪರೇಶ್ ಮೇಸ್ತ ಸಾವಿನ ಬಗ್ಗೆ ನಮಗೂ ಅನುಕಂಪವಿದೆ ಎಂದು, ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಉಡುಪಿಯಲ್ಲಿಂದು ಮಾತನಾಡಿದ ಅವರು, ಹೊನ್ನಾವರ ಗಲಭೆ ಹಿಂದಿನ ವಿಚಾರವೂ ತನಿಖೆಯಾಗಬೇಕು, ಅಮಿತ್ ಷಾ ಹೇಳಿಕೆಯಂತೆ ಬಿಜೆಪಿಗರು ಗಲಭೆಗೆ ಮುಂದಾಗಿದ್ದಾರೆ, ಪರೇಶ್ ಸಾವಿನ ಉನ್ನತ ತನಿಖೆಗಾಗಿ ಸಿಬಿಐಗೆ ವಹಿಸಲಾಗಿದೆ.  ಯಡಿಯೂರಪ್ಪ ಸಿಎಂ ಆಗಿದ್ದ ಸಮಯದಲ್ಲಿ ಎಷ್ಟು ಕೇಸುಗಳನ್ನು ಸಿಬಿಐಗೆ ವಹಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ ಸಿಎಂ ಹಲವು ಕೇಸುಗಳನ್ನು ಸಿಬಿಐಗೆ ವಹಿಸಿದ್ದಾರೆ ಎಂದರು.

ಪರೇಶ್ ಮೇಸ್ತ ಮರಣೋತ್ತರ ವರದಿ ಬಗ್ಗೆ ಶೋಭಾ ಅಪಸ್ವರ ವಿಚಾರದ ಕುರಿತು ಪ್ರತಿಕ್ರಿಸಿದ ಅವರು, ಶೋಭಾ ಕರಂದ್ಲಾಜೆ ಒಬ್ಬರೇ ವಿಶ್ವಾಸಹರ್ತೆಗೆ ಅರ್ಹರೇ.? ನಾನು ಒಬ್ಬ ಮಾತ್ರ ಸರಿಯಿದ್ದೇನೆ, ಇಡೀ ಲೋಕ ಸರಿಯಿಲ್ಲ ಅನ್ನೋ ಭಾವನೆ ಹೊಂದಿದ್ದಾರೆ, ಇದು ಸಂಸದೆ ಶೋಭಾರವರ ಮಾನಸಿಕ ಪರಿಸ್ಥಿತಿಯ ಪ್ರತಿಬಿಂಬ ಎಂದು ಕುಟುಕಿ, ಅಂತಹವರು ಜನಪ್ರತಿನಿಧಿಯಾಗಲು ಎಷ್ಟರ ಮಟ್ಟಿಗೆ ಯೋಗ್ಯರು ಎನ್ನುವುದನ್ನು ವಿಮರ್ಶಿಸಿಕೊಳ್ಳಲಿ ಎಂದು, ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ