‘ಮಾಧ್ಯಮಗಳ ಸಮೀಕ್ಷೆ ಮೇಲೆ ನಂಬಿಕೆ‌ ಇಲ್ಲ’15-12-2017

ತುಮಕೂರು: ತುಮಕೂರಿನ ಕೊರಟಗೆರೆಯಲ್ಲಿ ಇದೇ ತಿಂಗಳ ಡಿಸೆಂಬರ್ 17 ರಂದು ಮಹಿಳಾ ಸಬಲೀಕರಣ ಸಮಾವೇಶ ಆಯೋಜಿಸಲಾಗಿದೆ ಎಂದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಕೊರಟಗೆರೆಯಲ್ಲಿಂದು ಮಾತನಾಡಿದ ಅವರು, ಮಹಿಳೆಯರಲ್ಲಿ ಸಂಘಟನೆ ಶಕ್ತಿ ಹೆಚ್ಚಿಸಲು ಸಮಾವೇಶ ಆಯೋಜಿಸಲಾಗುತ್ತಿದೆ ಎಂದ ಅವರು, ಸಮಾವೇಶದಲ್ಲಿ ಸಚಿವೆ ಉಮಾ ಶ್ರೀ, ಮೋಟ್ಟಮ್ಮ, ಜಯಮಾಲ, ರಾಣಿ ಸತೀಶ್ ಭಾಗಿಯಾಗಲಿದ್ದಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯಾಗುತ್ತಿದೆ, ಸಿಎಂ 124 ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ, ನಾನು 102 ಕ್ಚೇತ್ರಗಳ ಉಸ್ತುವಾರಿ ವಹಿಸಿಕೊಂಡಿದ್ದೇನೆ, ಇದನ್ನು ಬೇರೆ ಬೇರೆ ರೀತಿ ವ್ಯಾಖ್ಯಾನ ಮಾಡುತ್ತಿದ್ದಾರೆ, ನಾವಿಬ್ಬರು ಬೇರೆ ಬೇರೆಯಾಗಿದ್ದೇವೆ ಅಂತೆಲ್ಲಾ ಎನ್ನಲಾಗ್ತಿದೆ, ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಮತ್ತು ಜೆಡಿಎಸ್ ನ ಅನುಕರಣೆ ಮಾಡೋ‌ ಅವಶ್ಯಕತೆ ‌ಇಲ್ಲ ಎಂದರು. ನಾವು ಚುನಾವಣೆಯ ರಣ ನೀತಿಗಳನ್ನು ಎಲ್ಲರಿಗಿಂತಲೂ ಚೆನ್ನಾಗಿ ತಿಳಿದಿದ್ದೇವೆ, ಅದಕ್ಕಾಗಿ ನಾವು ಎರಡು ಟೀಂ ಮಾಡಿಕೊಂಡು ಹೊರಟ್ಟಿದ್ದೇವೆ, ಹಾಗಾಗಿ ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ, ಕಾಂಗ್ರೆಸ್ ಗೆ ಸಮನ್ವಯ ಕೊರತೆ‌ ಇದೆ, ಪಕ್ಷ ಇಬ್ಬಾಗ ಆಗಿದೆ ಅನ್ನೋರಿಗೆ ಇದು ಸ್ಪಷ್ಟೀಕರಣ ಎಂದು ನುಡಿದರು.

ಗುಜರಾತ್ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತೆದೆ ಎಂಬ ಮಾಹಿತಿ ‌ನನಗೆ ಲಭ್ಯವಾಗಿದೆ, ರಾಹುಲ್‌ ಗಾಂಧಿ ನಾಯಕತ್ವದಲ್ಲಿ ಹೊಸ ಹುರುಪು ಅಲ್ಲಿ ಕೆಲಸ ಮಾಡಿದೆ, ಹಾಗಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನ ಇಲ್ಲ ಎಂದರು. ಇನ್ನು  ಮಾಧ್ಯಮಗಳ ಸಮೀಕ್ಷೆ ಮೇಲೆ ನನಗೆ ನಂಬಿಕೆ‌ ಇಲ್ಲ, ಅದೆಲ್ಲಾ ಬುಡಮೇಲಾಗುತ್ತೆ, ಅಲ್ಲಿನ ಚುನಾವಣೆಯ ಫಲಿತಾಂಶ ನಮ್ಮ ರಾಜ್ಯದಲ್ಲಿ ಅಷ್ಟೊಂದು ಪರಿಣಾಮ ಬೀರಲ್ಲ ಎಂದರು.  ಸ್ವಲ್ಪ ದಿನದಲ್ಲೇ ಕೆಪಿಸಿಸಿಯಿಂದ ಹೌಸ್ ಫುಲ್ ಬೋರ್ಡ್ ಹಾಕ್ತೀನಿ, ಯಾಕಂದ್ರೆ ಪಕ್ಷಕ್ಕೆ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಎಂದಿದ್ದು, ವೀಕ್ಷಕರಿಂದ ಬಂದ ಮಾಹಿತಿ ಮೇರೆಗೆ ಅಭ್ಯರ್ಥಿಗಳ ಪಟ್ಟಿ ಫೈನಲ್ ‌ಆಗಲಿದೆ ಎಂದು ತಿಳಿಸಿದರು. ಸಿಎಂ ಮಗ ಸೇರಿದಂತೆ ಯಾರಿಗಾದ್ರೂ ಕಮಿಟಿ ತೀರ್ಮಾನದಂತೆ ಟಿಕೆಟ್ ಕೊಡಲಾಗುವುದು, ಕಮಿಟಿ ನಿರ್ಣಯಯವೇ ಅಂತಿಮ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

G.Parameshwara KPCC ಸಮಾವೇಶ ಹೌಸ್ ಫುಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ