ಕಾನೂನು ಬಾಹಿರ ಖಾತಾ ಬದಲಾವಣೆ ಪ್ರಕರಣ ಸಂಬಂಧ ನಗರಸಭೆ ಸದಸ್ಯನ ಬಂಧನ

Kannada News

13-04-2017

ಬಳ್ಳಾರಿ: ಕಾನೂನು ಬಾಹಿರವಾಗಿ ಖಾತಾ ಬದಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆ ನಗರಸಭೆ ಸದಸ್ಯ ವೇಣುಗೋಪಾಲ್ ಎನ್ನುವವರನ್ನು ನಗರ ಠಾಣೆ ಪೊಲೀಸರು  ಬುಧವಾರ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಭಾಗವಾಗಿ ವಿಚಾರಣೆ ನಿಮಿತ್ತ ಠಾಣೆಗೆ ಕರೆಯಿಸಿದ್ದ ವೇಣುಗೋಪಾಲ್ ರನ್ನು ವಿಚಾರಣೆ ನಂತರ ಬಂಧಿಸಲಾಗಿದೆ ಎಂದು ಡಿವೈಎಸ್ ಪಿ ಕುಮಾರ್ ಚಂದ್ರ ತಿಳಿಸಿದ್ದಾರೆ.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ