ಆಧಾರ್ ಲಿಂಕ್-ಮಾರ್ಚ್ 31 ಡೆಡ್‌ಲೈನ್

SC extends deadline for linking of Aadhaar

15-12-2017

ಏನಪ್ಪಾ ಇನ್ನೂ ಫೋನ್‌ ನಂಬರ್‌ಗೆ ಆಧಾರ್ ಲಿಂಕ್ ಮಾಡಿಲ್ಲ, ಅಕೌಂಟ್ ನಂಬರ್‌ಗೆ ಆಧಾರ್ ಲಿಂಕ್ ಮಾಡಿಲ್ಲ, ಅಲ್ಲೆಲ್ಲಾ ಹೋಗಿ ಬರೋಕೆ ಟೈಮೇ ಸಿಗ್ತಿಲ್ಲ ಏನ್ ಎಡವಟ್ಟು ಆಗುತ್ತೋ ಏನೋ ಅಂಥ ಚಿಂತೆ ಮಾಡ್ತಿದ್ದೀರಾ? ಅದರ ಅಗತ್ಯ ಇಲ್ಲ.  ನಿಮ್ಮ ಪ್ಯಾನ್, ಫೋನ್, ಬ್ಯಾಂಕ್ ಅಕೌಂಟ್, ಇನ್ಶುರೆನ್ಸ್ ಪಾಲಿಸಿ ಇತ್ಯಾದಿ ಎಲ್ಲಾ ದಾಖಲೆಗಳು ಮತ್ತು ಸರ್ಕಾರದ ಯೋಜನೆಗಳ ಜೊತೆಗೆ ಆಧಾರ್ ನಂಬರ್ ಲಿಂಕ್‌ ಮಾಡುವ ಕಡೇ ದಿನಾಂಕವನ್ನು ಮುಂದಿನ ವರ್ಷ ಅಂದರೆ, 2018ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. 

ವಿವಿಧ ಯೋಜನೆಗಳಿಗೆ ಆಧಾರ್ ಲಿಂಕ್ ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ವಿಚಾರಣೆ ವೇಳೆ, ಸುಪ್ರೀಂಕೋರ್ಟ್ ನೀಡಿದ ಸೂಚನೆ ಅನುಸಾರ ಈ ಹೊಸ ಡೆಡ್‌ ಲೈನ್ ಹೊರಬಿದ್ದಿದೆ. ಇತ್ತೀಚೆಗೆ ಸುಪ್ರೀಂಕೋರ್ಟಿನ 9 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ, ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ತೀರ್ಪು ನೀಡಿತ್ತು. ಆನಂತರ ‘ಆಧಾರ್ ಎಂಬ ಯೋಜನೆ ಬಗ್ಗೆ ಮತ್ತು ಎಲ್ಲದಕ್ಕೂ ಅದನ್ನು ಕಡ್ಡಾಯ ಮಾಡುವುದು ಖಾಸಗಿತನದ ಹಕ್ಕಿನ ಉಲ್ಲಂಘನೆ’ ಎಂದು ಹೇಳಿ ಹಲವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.  ಆ ಬಗ್ಗೆ ವಿಚಾರಣೆ ಮುಂದುವರಿಯಲಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ