ಟ್ರ್ಯಾಕ್ಟರ್ ಪಲ್ಟಿ: ಇಬ್ಬರ ದುರ್ಮರಣ

Tractor accident: Two Died

15-12-2017

ದಾವಣಗೆರೆ: ಮರಳು ತುಂಬಿದ ಟ್ರ್ಯಾಕ್ಟರ್, ರಸ್ತೆ ಮಧ್ಯೆ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆಯು ದಾವಣಗೆರೆಯಲ್ಲಿ ನಡೆದಿದೆ. ಬಸವರಾಜ್ ಹಾಗೂ ತಿಪ್ಪೇಶ್ ಮೃತ ದುರ್ದೈವಿಗಳು. ದಾವಣಗೆರೆ ತಾಲ್ಲೂಕು ಗಂಗನಕಟ್ಟೆ ಗ್ರಾಮದ ಕೆರೆಯ ಬಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮರಳು ತುಂಬಿಕೊಂಡು ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ ಹೊಡೆದಿದೆ. ಈ ವೇಳೆ ಮರಳಿನಲ್ಲಿ ಸಿಲುಕಿಕೊಂಡ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಘಟನೆಯಿಂದ ಭಯಗೊಂಡ ಟ್ರ್ಯಾಕ್ಟರ್ ಚಾಲಕ ಎಂಜಿನ್ ನೊಂದಿಗೆ ಪರಾರಿಯಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಾಯಕೊಂಡ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Tractor Accident ಪರಿಶೀಲನೆ ದಾವಣಗೆರೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ