ಹಿಂದೂ ಧರ್ಮ ಬಿಟ್ಟುಬಿಡಿ…

Renounce Hinduism, Embrace Buddhism:Ramdas Athawale

15-12-2017 343

‘ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯ ತಪ್ಪಿಸಿಕೊಳ್ಳುವ ಸಲುವಾಗಿ ದೇಶದ ಎಲ್ಲ ದಲಿತರೂ ಕೂಡ, ಹಿಂದೂ ಧರ್ಮ ಬಿಟ್ಟು ಬೌದ್ಧ ಧರ್ಮ ಸ್ವೀಕರಿಸಬೇಕು’ ಎಂದು ರಿಪಬ್ಲಿಕನ್ ಪಾರ್ಟಿ ಅಧ್ಯಕ್ಷ ಮತ್ತು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.

ಹಿಂದೂ ಧರ್ಮದಲ್ಲಿ ನಮಗೆ ನ್ಯಾಯ ದೊರೆಯುವುದಿಲ್ಲ ಎನ್ನುವ ಕಾರಣದಿಂದಲೇ ನಾನು ಬೌದ್ಧಧರ್ಮವನ್ನು ಸ್ವೀಕರಿಸಿದೆ ಮತ್ತು ನನ್ನ ಸಮುದಾಯದ ಇತರೆ ಜನರಿಗೂ ಹಾಗೆ ಮಾಡಲು ಹೇಳಿದೆ ಎಂದಿರುವ ರಾಮದಾಸ್ ಅಠಾವಳೆ, ಡಾ.ಬಿ.ಆರ್.ಅಂಬೇಡ್ಕರ್ ಅವರೂ ಕೂಡ ತಮಗೆ ಹಿಂದೂ ಧರ್ಮದಲ್ಲಿ ನ್ಯಾಯ ದೊರೆಯುವುದಿಲ್ಲ ಅನ್ನುವುದನ್ನು ಮನಗಂಡೇ ಬೌದ್ಧ ಧರ್ಮಕ್ಕೆ ಸೇರಿಕೊಂಡರು ಮತ್ತು ಇತರೆ ಲಕ್ಷಾಂತರ ಜನ ದಲಿತರಿಗೂ ಪ್ರೇರಣೆಯಾದರು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದೇ ವೇಳೆ ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿಯನ್ನು ಟೀಕಿಸಿದ ಅಠಾವಳೆ, ‘ಅವರು ಪದೇ ಪದೇ ನಾನು ಬೌದ್ಧ ಧರ್ಮಕ್ಕೆ ಸೇರಿಕೊಂಡು ಬಿಡುತ್ತೇನೆ ಎಂದು ಬೆದರಿಕೆ ಹಾಕುತ್ತಿರುತ್ತಾರೆ. ಅದರ ಬದಲು ಸುಮ್ಮನೆ ಸೇರಿಕೊಳ್ಳುವುದು ಒಳ್ಳೆಯದು’ ಎಂದು ಹೇಳಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ