ಅಧಿಕಾರಿಗಳ ಸೋಗಿನಲ್ಲಿ ದರೋಡೆ

Fake income tax officers and robbery

15-12-2017 220

ಬೆಂಗಳೂರು: ಅದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಂದು ಹೇಳಿ, ಮನೆಯೊಂದರ ಮೇಲೆ ದಾಳಿ ನಡೆಸಿ, ನಗದು-ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆಯು ಬೆಂಗಳೂರಲ್ಲಿ ನಡೆದಿದೆ, ನಗರದ ದೊಡ್ಡಬೊಮ್ಮಸಂದ್ರದ ನಿವಾಸಿ, ಲಾವಣ್ಯ ಎಂಬುವರ ಮನೆಯಲ್ಲಿ ದರೋಡೆ ಕೋರರು ಈ ಕೃತ್ಯ ಎಸಗಿದ್ದಾರೆ. ಇನ್ ಕಮ್ ಟ್ಯಾಕ್ಸ್ ಅಧಿಕಾರಿಗಳು ಎಂದು, ರಾತ್ರಿ 11 ಗಂಟೆ ಸುಮಾರಿನಲ್ಲಿ  ಮನೆ ಬಾಗಿಲು ಬಡಿದು, ಏಕಾಏಕಿ ಮನೆ ಒಳಗೆ ಧಾವಿಸಿದ್ದಾರೆ. ಈ ವೇಳೆ ಮನೆಯಲ್ಲಿ ಲಾವಣ್ಯ ಅವರ ಮಗ ರಾಕೇಶ್ ಮಾತ್ರ ಇದ್ದು, ಆತನ ಕೈಕಾಲು ಕಟ್ಟಿ ಹಣ-ಚಿನ್ನಾಭರಣ ದೋಚಿದ್ದಾರೆ. ಲಾವಣ್ಯ ಅವರು ಮನೆಗೆ ಬಂದಾಗಲೂ ಕಳ್ಳರು ಮನೆಯಲ್ಲೇ ಇದ್ದು, ಕೂಡಲೇ ಕಳ್ಳ ಕಳ್ಳ ಎಂದು ಕೂಗಿಕೊಂಡಾಗ ಎಸ್ಕೇಪ್ ಆಗಿದ್ದಾರೆ. ಘಟನೆಯಲ್ಲಿ 26 ಸಾವಿರ ನಗದು, ಒಂದು ಚಿನ್ನದ ಸರ ಕದ್ದೊಯ್ದಿದ್ದಾರೆ. ಈ ಕುರಿತು ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಿಚಯಸ್ಥರೇ ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಕೈಗೊಂಡಿದ್ದಾರೆ.ಸಂಬಂಧಿತ ಟ್ಯಾಗ್ಗಳು

robbery Income Tax ಚಿನ್ನಾಭರಣ ಎಸ್ಕೇಪ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ