ಕೆರೆಯಲ್ಲಿ ಸ್ನಾನ ಮಾಡಲು ಹೋದಂತ ನವವಿವಾಹಿತ ನೀರುಪಾಲು

Kannada News

13-04-2017

ಯಾದಗಿರಿ  : ಯಾದಗಿರಿ ತಾಲ್ಲೂಕಿನ ಮೈಲಾಪೂರ ಗ್ರಾಮದ ಕೆರೆಯಲ್ಲಿ ಸ್ನಾನ ಮಾಡಲು ಹೋದಂತ ನವವಿವಾಹಿತ ನೀರುಪಾಲು. ನವವಿವಾಹಿತ ಮಲ್ಲಪ್ಪ ಮೂರದಿನಗಳ ಹಿಂದೆ ಗೋವಿಂದಮ್ಮನ ಜೊತೆ ಮದುವೆಯಾಗಿದ್ದ. ದೇವರ ಹರಿಕೆ ತೀರಿಸಲು ಮೈಲಾಪೂರನ ಮಲ್ಲಯ್ಯನ ದೇವಸ್ಥಕ್ಕೆ ಕುಟುಂಸ್ಥರೊಂದಿಗೆ ಆಗಮಿಸಿದ ಮಲ್ಲಪ್ಪ (೨೩) ತೆಲ್ಲಾಂಗಾಣ ಮೂಲದ ಮಹಿಬೂಬ ನಗರ ಜಿಲ್ಲೆಯ ನಾರಯಣಪೇಟ್ ತಾಲ್ಲುಕಿನ ಮೋನಾಪೂರ ಗ್ರಾಮದ ನಿವಾಸಿಯಾಗಿದ್ದು ಮಲ್ಲಪ್ಪನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ