ಖರ್ಗೆ ಕಾಂಗ್ರೆಸ್ ಸಿಎಂ..?

Kharge and Karnataka election

14-12-2017 2863

ಒಂದು ವೇಳೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ, ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಮಾಡುವ ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗಿದೆ. ಕಾಂಗ್ರೆಸ್ ಪಕ್ಷದ ಇಂಥ ಒಂದು ಪ್ರಸ್ತಾಪಕ್ಕೆ, ಸಿದ್ದರಾಮಯ್ಯನವರು ಕೂಡ ಒಪ್ಪಿಗೆ ನೀಡುವ ಸಾಧ್ಯತೆಯೂ ಇದೆಯಂತೆ.

ಸಿದ್ದರಾಮಯ್ಯನವರು, ಕಳೆದ 5 ವರ್ಷಗಳ ತಮ್ಮ ಆಡಳಿತ ವೈಖರಿ, ರಾಜಕೀಯ ಪಟ್ಟುಗಳು ಮತ್ತು ಮಾತುಗಾರಿಕೆಯಿಂದ ಈಗಾಗಲೇ ದೇಶದೆಲ್ಲೆಡೆ ಹೆಸರಾಗಿದ್ದಾರೆ. ಹೀಗಾಗಿ, 2019ರ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರನ್ನು, ರಾಷ್ಟ್ರಮಟ್ಟದಲ್ಲಿ ಪಕ್ಷದ ನಾಯಕರಾಗಿ ಬಿಂಬಿಸಿ, ಪಕ್ಷದ ಪರ ತಾರಾ ಪ್ರಚಾರಕರಾಗಿ ಬಳಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.ಸಂಬಂಧಿತ ಟ್ಯಾಗ್ಗಳು

Mallikarjun kharge Lok Sabha ಮುಖ್ಯಮಂತ್ರಿ ಚುನಾವಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Mallikarjuna 100% k.cm.
  • bheema