ಖಾಕಿ ಮೇಲೆ ಕೃಷ್ಣನ ಸೀಲು…!

Mathura cops, uniforms may feature logo of Lord Krishna..?

14-12-2017 293

ಭಾರತದ ಪೊಲೀಸರು ಖಾಕಿ ಸಮವಸ್ತ್ರ ಧರಿಸುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಆದರೆ, ಇನ್ನುಮೇಲೆ ಉತ್ತರ ಪ್ರದೇಶದ ಮಥುರಾ ಮತ್ತು ವೃಂದಾವನಗಳ ಪೊಲೀಸರು, ಕೃಷ್ಣನ ಚಿತ್ರವಿರುವ ಯೂನಿಫಾರ್ಮ್ ಧರಿಸುವ ಸಾಧ್ಯತೆ ಇದೆ.  ಇತ್ತೀಚೆಗೆ, ಉತ್ತರ ಪ್ರದೇಶ ಸರ್ಕಾರ, ಮಥುರಾ ನಗರವನ್ನು ಅಧಿಕೃತ ‘ಪವಿತ್ರ ಯಾತ್ರಾ ಸ್ಥಳ’ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರಿಗೆ ಕೃಷ್ಣನ ಬಿಂಬ ಹೊಂದಿರುವ ಯೂನಿಫಾರ್ಮ್ ನೀಡುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ. ಸ್ಥಳೀಯ ಪೊಲೀಸರನ್ನು ‘ಪ್ರವಾಸಿ ಸ್ನೇಹಿ’ಗಳಾಗಿ ಮಾಡುವುದೇ ಇದರ ಹಿಂದಿನ ಉದ್ದೇಶ ಎಂದು ಸರ್ಕಾರ ಹೇಳಿಕೊಂಡಿದೆ.

ಆದರೆ, ಭಾರತದ ಸಂವಿಧಾನದಲ್ಲಿನ ಜಾತ್ಯತೀತ ಮೌಲ್ಯಗಳ ಅನುಸಾರ, ಪೊಲೀಸರು ಯಾವುದೇ ರೀತಿಯ ಧಾರ್ಮಿಕ ಚಿಹ್ನೆ ಪ್ರದರ್ಶಿಸುವುದು ನಿಷಿದ್ಧ. ಹೀಗಾಗಿ, ಇದೆಲ್ಲವೂ ರಾಜ್ಯವನ್ನು ಕೇಸರೀಕರಣ ಮಾಡಲು, ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮಾಡುತ್ತಿರುವ ಪ್ರಯತ್ನಗಳು ಎಂಬ ಆರೋಪಗಳು ಕೇಳಿ ಬಂದಿವೆ. ಈಗಾಗಲೇ, ರಾಜ್ಯದ ರಾಜಧಾನಿ ಲಖನೌನಲ್ಲಿನ ಎಲ್ಲ ಸರ್ಕಾರಿ ಕಚೇರಿಗಳಿಗೆ ಕೇಸರಿ ಬಣ್ಣ ಬಳಿಯಲು ನಿರ್ಧರಿಸಿರುವುದಕ್ಕೂ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.

ಶ್ರೀ ಕೃಷ್ಮ ಜನಿಸಿದ ಊರು ಎಂದು ಪ್ರಸಿದ್ಧವಾಗಿರುವ ಮಥುರಾ ಮತ್ತು ಆಟವಾಡುತ್ತಾ ಬೆಳೆದ ಊರೆಂದು ಹೆಸರಾಗಿರುವ ವೃಂದಾವನಕ್ಕೆ ಹಿಂದೂಗಳು ಮಾತ್ರವಲ್ಲ, ಇತರೆ ಎಲ್ಲ ಧರ್ಮ ಜಾತಿಗಳಿಗೂ ಸೇರಿದ ಪ್ರವಾಸಿಗರು ಭೇಟಿ ಕೊಡುತ್ತಾರೆ, ಹೀಗಾಗಿ, ಪೊಲೀಸರ ಸಮವಸ್ತ್ರದ ಮೇಲೆ ಕೃಷ್ಣನ ಚಿತ್ರ ಹಾಕುವುದು ಸರಿಯಲ್ಲ ಎಂಬ ಮಾತು ಪೊಲೀಸ್ ವಲಯದಿಂದಲೂ ಕೇಳಿಬಂದಿದೆ.ಸಂಬಂಧಿತ ಟ್ಯಾಗ್ಗಳು

Yogi Adityanath Mathura ಜಾತ್ಯತೀತ ಸಂವಿಧಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಭಾರತದ ಪೊಲೀಸರು ಖಾಕಿ ಸಮವಸ್ತ್ರ ಧರಿಸುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಆದರೆ, ಇನ್ನುಮೇಲೆ ಉತ್ತರ ಪ್ರದೇಶದ ಮಥುರಾ ಮತ್ತು ವೃಂದಾವನಗಳ ಪೊಲೀಸರು, ಕೃಷ್ಣನ ಚಿತ್ರವಿರುವ ಯೂನಿಫಾರ್ಮ್ ಧರಿಸುವ ಸಾಧ್ಯತೆ ಇದೆ.
  • ramya
  • Professional