10 ಕೆಜಿ ಗಾಂಜಾ ಮತ್ತು ಇಬ್ಬರ ಬಂಧನ

10 kg ganja and 2 arrested

14-12-2017

ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ದಕ್ಷಿಣ ವಿಭಾಗದ ಪೊಲೀಸರು 10 ಕೆ.ಜಿ 400 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಶಾಖಾಂಬರಿನಗರ ರಾಜರಾಜೇಶ್ವರಿ ನಗರದ ಅರುಣ(22) ಕೋಲಾರದ ರಹಮತ್ ನಗರದ ಶಾಬುದ್ದೀನ್(20)ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 2 ಲಕ್ಷ 50 ಸಾವಿರ ಮೌಲ್ಯದ 10 ಕೆ.ಜಿ 400 ಗ್ರಾಂ ಗಾಂಜಾ, 950 ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಕಮೀಷನರ್(ಡಿಸಿಪಿ) ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಕಾಲೇಜು ವಿಧ್ಯಾರ್ಥಿಗಳು, ಐಟಿ ಕಂಪನಿಗಳು ಇನ್ನಿತರ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಆರೋಪಿಗಳು ಗಾಂಜಾ ಮತ್ತು ಮಾಧಕ ವಸ್ತುವನ್ನು ಮಾರಾಟ ಮಾಡುತ್ತಿದ್ದರು. ಬಂಧಿತರು ಬೇರೆಡೆಯಿಂದ ಗಾಂಜಾ ತಂದು ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ. ಆರೋಪಿಗಳು ಜಯನಗರದ 7ನೇ ಬ್ಲಾಕ್‍ನ ನ್ಯಾಷನಲ್ ಕಾಲೇಜ್ ಹಿಂಭಾಗ ಗಾಂಜಾ ಮಾರಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಜಯನಗರ ಪೊಲೀಸ್ ಇನ್ಸ್ ಪೆಕ್ಟರ್ ಉಮಾಮಹೇಶ್ ಮತ್ತವರ ಸಿಬ್ಬಂದಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ganja commissioner ವಿಧ್ಯಾರ್ಥಿ ಐಟಿ ಕಂಪನಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ