ಪರಮ್ ಬಹುತೇಕ ನಾಪತ್ತೆ...!

Param is almost missing...!

14-12-2017

ರಾಜ್ಯ ರಾಜಕಾರಣದಲ್ಲಿ ವಿರೋಧ ಪಕ್ಷಗಳ ಏಟಿಗೆ ಎದಿರೇಟು ಕೊಡುವ ಕೆಲಸ ಬಂದಾಗ, ಅದರಿಂದ ತಪ್ಪಿಸಿಕೊಳ್ಳುವುದರಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಿಷ್ಣಾತರು ಎಂದು ತೋರಿಸಿಕೊಡುತ್ತಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ಮೊದಲುಗೊಂಡು ಈಶ್ವರಪ್ಪ, ಅನಂತ್ ಕುಮಾರ್ ಹೆಗಡೆ ಇತ್ಯಾದಿ ಎಲ್ಲರೂ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುತ್ತಾರೆ. ಆದರೆ, ಇದಕ್ಕೆಲ್ಲ ಬಹುತೇಕ ಸಿಎಂ ಸಿದ್ದರಾಮಯ್ಯನವರೊಬ್ಬರೇ ಪಕ್ಷ ಮತ್ತು ಸರ್ಕಾರದ ಪರವಾಗಿ ಪ್ರತ್ಯುತ್ತರ ಕೊಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಆರೋಪಗಳಿಗೆ, ಮಾತುಗಳಿಗೆ ತಕ್ಕ ಉತ್ತರ ನೀಡಬೇಕಾದ ಸಂದರ್ಭಗಳಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದ ಪರಮೇಶ್ವರ್ ಅತ್ಯಂತ ಸೇಫ್ ರಾಜಕಾರಣ ಮಾಡುತ್ತಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಭಿನ್ನಾಭಿಪ್ರಾಯವಿರುವುದು ಸಿಎಂ ಸಿದ್ದರಾಮಯ್ಯನವರ ಜೊತೆಗೇ ಹೊರತು, ವಿರೋಧ ಪಕ್ಷಗಳ ಜೊತೆ ಅಲ್ಲ, ಹೀಗಾಗಿ, ಅವರು ಅಲ್ಲಿಇಲ್ಲಿ ಅನುಕೂಲವಿದ್ದಾಗ ಮಾತ್ರ ಕಾಣಿಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಅನ್ನುವ ಗುಸುಗುಸು ಪಕ್ಷದೊಳಗಿನಿಂದಲೇ ಕೇಳಿ ಬರುತ್ತಿದೆ. ಪರಮೇಶ್ವರ್ ಅವರು ಹೀಗೇ ಮಾಡುತ್ತಿದ್ದರೆ, ಮುಂದಿನ ಬಾರಿಯೂ ಅವರಿಗೆ ಗೆಲ್ಲುವ ಮತ್ತು ಗದ್ದುಗೆಯೇರುವ ಅವಕಾಶ ತಪ್ಪಿಹೋಗುವ ಸಾಧ್ಯತೆ ಈಗಲೇ ಖಾತ್ರಿಯಾದಂತಿದೆ ಎಂದು ಕಾಂಗ್ರೆಸ್ ಪಕ್ಷದವರೇ ಮಾತನಾಡಿಕೊಳ್ಳುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

G. Parameshwara KPCC ರಾಜಕಾರಣ ಈಶ್ವರಪ್ಪ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ