‘ಶೀಘ್ರದಲ್ಲೇ ಅವ್ಯವಹಾರ ಬಯಲು ಮಾಡ್ತೀನಿ’14-12-2017

ಬೆಂಗಳೂರು: ಮೈಸೂರು ಮಿನರಲ್ಸ್ ನಲ್ಲಿ ನಡೆದ ಅವ್ಯವಹಾರವನ್ನು ಅತಿ ಶೀಘ್ರದಲ್ಲಿ ಬಯಲು ಮಾಡುತ್ತೇನೆ ಎಂದು ಹೆಚ್.ಡಿ ಕುಮಾರ ಸ್ವಾಮಿ ಅವರು ಹೇಳಿದ್ದಾರೆ. ನಗರದ ಜೆಪಿ ಭವನದಲ್ಲಿ ಮಾತನಾಡಿದ ಕುಮಾರ ಸ್ವಾಮಿ ಅವರು, ಇದೇ ತಿಂಗಳ 18ರ ನಂತರ ಹಗರಣ ಬಯಲು ಮಾಡುವುದಾಗಿ ತಿಳಿಸಿದರು.  

ಗುಜರಾತ್ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಹಲವಾರು ಬದಲಾವಣೆಗಳು ಆಗಲಿವೆ ಎಂದರು. ಇನ್ನು ಪರೇಶ್ ಮೇಸ್ತ ಸಾವಿನ ಪ್ರಕರಣ ಈಗ ಸಿಬಿಐಗೆ ಕೊಟ್ಟಿದ್ದಾರೆ, ಮೊದಲೇ ಈ ಗಲಾಟೆ ಆಗದಂತೆ ತಡೆಯಬಹುದಿತ್ತು, ನಾನು ಸಿಎಂ ಆಗಿದ್ದಾಗ ದತ್ತಪೀಠ ಪ್ರಕರಣದಲ್ಲಿ ಗಲಾಟೆ ಆಗದಂತೆ ನೋಡಿಕೊಂಡೆ, ಬಿಎಸ್ ವೈ ಜೊತೆಯಲ್ಲಿ ಇದ್ದಾಗಲೇ ಹೆದರದೆ ಗಲಾಟೆ ಮಾಡಿದ ಬಿಜೆಪಿ ಮುಖಂಡರನ್ನು ಅರೆಸ್ಟ್ ಮಾಡಿಸಿದೆ ಎಂದರು.

ಮಂಗಳೂರಿನಲ್ಲಿ ಈಗ ಕಾಂಗ್ರೆಸ್ ನವರು ಸೌಹಾರ್ದ ಮೆರವಣಿಗೆ ಮಾಡುತ್ತಿದ್ದಾರೆ, ಮೊದಲೇ ಮಾಡೋದಕ್ಕೆ ಏನಾಗಿತ್ತು, ಗಲಾಟೆ ಆಗದಂತೆ ಪೊಲೀಸ್ ಫೋರ್ಸ್ ಹಾಕಲು ಏನಾಗಿತ್ತು, ಒಂದು ವಾರ ಸಿಎಂಗೆ ಉಸಿರೇ ಇರಲಿಲ್ಲ, ಈಗ ಜನರು ಶಾಂತವಾಗಿರಿ ಎಂದು ಹೇಳುತ್ತಿದ್ದಾರೆ ಎಂದು ಹರಿಹಾಯ್ದರು. ಎರಡೂ ರಾಷ್ಟ್ರೀಯ ಪಕ್ಷಗಳು ಈ ವಿಷಯದ ಮೇಲೆ ಚುನಾವಣೆ ಮಾಡಲು ಹೊರಟಿವೆ, ಜೆಡಿಎಸ್ ನ 8 ಜನ ಕಾರ್ಯಕರ್ತರು ಹತ್ಯೆಗೀಡಾದರು, ನಾವೇನು ಬೆಂಕಿ ಹಚ್ಚಿ ಗಲಾಟೆ ಮಾಡಿಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

HD kumaraswamy Mysore minerals ಅವ್ಯವಹಾರ ಗುಜರಾತ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ