'ನಾವು ನಮ್ಮ ಸಂಸ್ಕೃತಿ ಮರೆಯುತ್ತಿದ್ದೇವೆ'14-12-2017 151

ಹಾಸನ: ಹಾಸನದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ, ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಭಾಗವಹಿಸಿದ್ದು, ಈ ವೇಳೆ ತಮ್ಮ ಭಾಷಣದಲ್ಲಿ, ಸ್ವಾಮಿ ವಿವೇಕಾನಂದ ತತ್ವಗಳನ್ನ ಅಳವಡಿಸಿಕೊಂಡರೆ ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು. ವಿವೇಕಾನಂದರು ಕೆಲವು ವರ್ಷ ಬದುಕಿದ್ದರೂ ಮಾದರಿಯಾಗಿದ್ದರು. ಒಬ್ಬ ಮನುಷ್ಯ ಎಷ್ಟು ವರುಷ ಬದುಕುತ್ತಾನೆ ಮುಖ್ಯವಲ್ಲ, ಹೇಗೆ ಜೀವನ ಉತ್ತಮವಾಗಿ, ನ್ಯಾಯಯುತವಾಗಿ ಜೀವಿಸಿದ ಎಂಬುದು ಮುಖ್ಯ ಎಂದು ಹೇಳಿದರು.

ನಾವು ನಮ್ಮ ಸಂಸ್ಕೃತಿ ಮರೆಯುತ್ತಿದ್ದೆವೆ, ಕೇವಲ ಸ್ವಾರ್ಥದಿಂದ ಎಲ್ಲರು ಸುಖಿಯಾಗಿರಲು ಸಾಧ್ಯವಿಲ್ಲ, ಎಲ್ಲರು ಉತ್ತಮ ಜೀವನ ನಡೆಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ, ಕೇವಲ ಜಾತಿಯ ಹೆಸರಲ್ಲಿ ಸೇವೆ ಸಲ್ಲದು, ಮಾನವರೆಲ್ಲಾ ಸಮಾನರು ಎಂಬ ಮಾನೋಭಾವನೆಯಿಂದ ಸಮಾಜ ಸೇವೆ ಮಾಡಬೇಕು, ವಿಶ್ವವೇ ಒಂದು ಕಟುಂಬ ಎಂಬ ದೃಷ್ಟಿ ಇರಬೇಕು ಎಂದರು.

ಗುಜರಾತನಲ್ಲಿ ಭೂ ಕಂಪವಾದಾಗ ಕೇವಲ ಒಂದು ಧರ್ಮದವರು ಸಹಾಯ ಮಾಡಲಿಲ್ಲ, ಎಲ್ಲಾ ಕೋಮಿನವರು ವಿಶ್ವದ ಎಲ್ಲಾ ಭಾಗದವರು ಸಹಾಯ ಮಾಡಿದರು ಇದು ಮುಖ್ಯ. ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕು ಅನ್ನೊ ಜ್ಞಾನ ನಮಗಿದೆ ಆದರೆ ಅದು ಅನುಷ್ಟಾನ ಮಾಡುತ್ತಿಲ್ಲ. ದೇಶದಲ್ಲಿ ಸ್ತ್ರೀಯರನ್ನ ಸಶಕ್ತ ಗೊಳಿಸೊ ಅಗತ್ಯ ಇಲ್ಲ, ಈಗಾಗಲೇ ನಮ್ಮ ದೇಶದ ಸ್ತ್ರೀ ಸಶಕ್ತಳಾಗಿದ್ದಾಳೆ, ಆದರೆ ಸ್ತ್ರೀಗೆ ಅವಕಾಶ ಕಲ್ಪಿಸಿಕೊಡಬೇಕಾಗಿದೆ ಎಂದರು.ಸಂಬಂಧಿತ ಟ್ಯಾಗ್ಗಳು

vajubhai vala Governor ರೆಡ್ ಕ್ರಾಸ್ ವಿವೇಕಾನಂದ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ