ಸುನೀಲ್ ಹೆಗ್ಗರವಳ್ಳಿ ಅಸಮಾಧಾನ

Sunil heggaravalli allegation on

14-12-2017

ಬೆಂಗಳೂರು: ಸಿಸಿಬಿ ಪೊಲೀಸರ ವಿರುದ್ಧ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅಸಮಾಧಾನಗೊಂಡಿದ್ದಾರೆ. ರವಿ ಬೆಳಗೆರೆ ಪ್ರಭಾವಕ್ಕೆ ಸಿಸಿಬಿ ಅಧಿಕಾರಿಗಳು ಒಳಗಾಗಿದ್ದಾರೆಂದು ಅವರು ಆರೋಪಿಸಿದ್ದಾರೆ. ರವಿ ಬೆಳಗೆರೆ ಮನೆಯಲ್ಲಿ ಜಿಂಕೆ ಚರ್ಮ ಹಾಗೂ ಆಮೆ ಚಿಪ್ಪು ಸಿಕ್ಕಿದ್ದವು, ಆದರೂ ಸಿಸಿಬಿ ಪೊಲೀಸರು ಯಾವುದೇ ದೂರು ದಾಖಲಿಸಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಜಿಂಕೆ ಚರ್ಮ ಹಾಗೂ ಆಮೆ ಚಿಪ್ಪುಗಳನ್ನು ಎಫ್ಐಆರ್ ದಾಖಲಿಸದೇ ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ, ಸಿಸಿಬಿ ಅಧಿಕಾರಿಗಳಿಗೆ ದೂರು ದಾಖಲಿಸುವ ಅಧಿಕಾರ ಇದೆ, ಅದರೂ ತನಿಖೆ ನಡೆಸದೇ ಅರಣ್ಯ ಇಲಾಖೆಗೆ ವಹಿಸಿದ್ದಾರೆ, ಸಿಐಡಿಯಲ್ಲಿ ಅರಣ್ಯ ಘಟಕ ಇದ್ದರೂ ಪ್ರಕರಣ ವರ್ಗಾವಣೆ ಆಗಿಲ್ಲ ಎಂದರು. ಈ ವಿಚಾರಲ್ಲಿ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು, ಪೊಲೀಸರು ಅಗತ್ಯ ಕ್ರಮಕೈಗೊಳ್ಳದಿದ್ದರೆ ನಾನೇ ನ್ಯಾಯಾಲದ ಗಮನಕ್ಕೆ ತರುತ್ತೇನೆ ಎಂದು ಎಚ್ಚರಿಸಿದ್ದಾರೆ. ಇನ್ನು ರವಿ ಬೆಳಗೆರೆಗೆ ಜಾಮೀನು ಸಿಕ್ಕಿದ್ದು, ಬಿಡುಗಡೆಯ ನಂತರ ನನಗೆ ತೊಂದರೆ ಕೊಡುವ ಸಾಧ್ಯತೆ ಇದೆ, ಹೀಗಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಮೂಲಕ ಜಾಮೀನು ನೀಡದಂತೆ ಕೋರ್ಟ್ ಮನವಿ ಮಾಡುತ್ತೇನೆ ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ