ಪ್ರತಿ ಜಿಲ್ಲೆಯಲ್ಲೂ ಬಯಲು ಬಂದೀಖಾನೆ...!     

SC tells states to consider open prison in each district

14-12-2017

ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಒಂದೊಂದು ಬಯಲು ಬಂದೀಖಾನೆ ನಿರ್ಮಿಸುವ ವಿಚಾರ ಪರಿಗಣಿಸಿ ಎಂದು ಎಲ್ಲಾ ರಾಜ್ಯಗಳಿಗೆ ಸುಪ್ರೀಂಕೋರ್ಟ್ ಹೇಳಿದೆ. ಸದ್ಯಕ್ಕೆ ದೇಶದಲ್ಲಿ 63 ಬಯಲು ಬಂದೀಖಾನೆಗಳಿದ್ದು, ಅವುಗಳಲ್ಲಿ 3,789 ಖೈದಿಗಳಿದ್ದಾರೆ. ಆದರೆ, ಈ ಬಯಲು ಬಂದೀಖಾನೆಗಳು ತಮ್ಮ ವ್ಯವಸ್ಥೆಯ ಶೇ.70ರಷ್ಟು ಭಾಗದಷ್ಟು ಮಾತ್ರವನ್ನು ಬಳಸಿಕೊಂಡಿದ್ದು ಇನ್ನೂ ಸಾಕಷ್ಟು ಖೈದಿಗಳನ್ನು ಇಂಥ ಕಡೆ ಇರಿಸಲು ಅವಕಾಶವಿದೆ. ಆದರೆ. ಸಾಮಾನ್ಯ ಜೈಲುಗಳು ಖೈದಿಗಳಿಂದ ತುಂಬಿ ತುಳುಕುತ್ತಿದ್ದು, ಅಲ್ಲಿ ಉಸಿರಾಡುವುದೇ ಕಷ್ಟ ಎನ್ನುವಂತಾಗಿದೆ.

ಬಯಲು ಬಂದೀಖಾನೆ ಸ್ಥಾಪನೆಯಲ್ಲಿ ರಾಜಸ್ಥಾನ ಮುಂದಿದೆ. ಅಲ್ಲಿ ಸದ್ಯಕ್ಕೆ 29 ಬಯಲು ಬಂದೀಖಾನೆಗಳಿವೆ. ದೇಶದ ಇತರೆ 17 ರಾಜ್ಯಗಳಲ್ಲಿ ಬಯಲು ಬಂದೀಖಾನೆಗಳಿವೆ. ಮಹಾರಾಷ್ಟ್ರದಲ್ಲಿ 13, ಕೇರಳ ಮತ್ತು ತಮಿಳುನಾಡಿನಲ್ಲಿ ತಲಾ 3 ಮತ್ತು ಗುಜರಾತ್ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 2 ಬಯಲು ಬಂದೀಖಾನೆಗಳಿವೆ. ಆಂಧ್ರಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ(ಪರಪ್ಪನ ಅಗ್ರಹಾರ), ಮಧ್ಯಪ್ರದೇಶ, ಒಡಿಶಾ, ಪಂಜಾಬ್, ತೆಲಂಗಾಣ ಮತ್ತು ಉತ್ತರಾಖಂಡಗಳಲ್ಲಿ ತಲಾ ಒಂದು ಬಯಲು ಬಂದೀಖಾನೆಯಿದೆ.  ಖೈದಿಗಳ ಸುಧಾರಣೆ ಮತ್ತು ಮನಃಪರಿವರ್ತನೆ ಮಾಡುವಲ್ಲಿ ಬಯಲು ಬಂದೀಖಾನೆಗಳು, ಇತರೆ ಜೈಲುಗಳಿಗಿಂತ ಉತ್ತಮ ಎಂಬ ಮಾತು ನ್ಯಾಯಾಲಯಗಳಿಂದ, ಚಿಂತಕರಿಂದ ಮತ್ತು ಸಾಮಾಜಿಕ ಕಾರ್ಯಕರ್ತರಿಂದ ಕೇಳಿಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ತೆರೆದ ಅಥವಾ ಬಯಲು ಕಾರಾಗೃಹ ಗಳನ್ನು ಮೊಟ್ಟ ಮೊದಲು ಯಾರು ಪ್ರಾರಂಭಿಸಿದರು ಮತ್ತು ಎಲ್ಲಿ ಈ ಪ್ರಶ್ನೆಗೆ ಉತ್ತರವನ್ನು ಕಳುಹಿಸಿ
  • ಶಂಕರ ಓರಬಾಯಿ
  • ವಿದ್ಯಾರ್ಥಿ