‘ಬಿಎಸ್ ವೈ ಬುಟ್ಟಿಯಲ್ಲಿ ಹಾವಿಲ್ಲ’14-12-2017

ಕೊಪ್ಪಳ: ಕೋಮು ಸೌಹಾರ್ದತೆ ಕೆದಕುವ ಮೂಲಕ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು, ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಕೊಪ್ಪಳದ ಕುಷ್ಟಗಿಯಲ್ಲಿಂದು ಮಾತನಾಡಿ ಅವರು, ಸರ್ಕಾರದ ವಿರುದ್ಧ ಹೋರಾಟ ಮಾಡುವದಕ್ಕೆ ಬಿಜೆಪಿಗೆ ಯಾವುದೇ ವಿಷಯ ಇಲ್ಲ. ಹೀಗಾಗಿ, ಯಡಿಯೂರಪ್ಪ ಬುಟ್ಟಿಯಲ್ಲಿ ಇಲ್ಲದ ಹಾವು ಬಿಡುತ್ತಿದ್ದಾರೆ, ಅವರ ಬುಟ್ಟಿಯಲ್ಲಿ ಯಾವುದೇ ಹಾವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲೀಗ ಬಿಜೆಪಿ ಕೋಮು ಪ್ರಚೋದನೆ ಮಾಡುತ್ತಿದ್ದಾರೆ. ಅಧಿವೇಶನ ವೇಳೆ ಹಗರಣದ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದರು ಬಿಎಸ್ ವೈ, ಎಲ್ಲಿ ಹಗಣದ ದಾಖಲೆಗಳೆಂದು ಕುಟುಕಿದರು. ಇನ್ನು ಪರೇಶ್ ಹತ್ಯೆಗೆ ಸಂಬಂದಿಸಿದಂತೆ, ಅವರ ಕುಟುಂಬದ ಒತ್ತಡ ಹಿನ್ನೆಲೆ ಪ್ರಕರಣ ಸಿಬಿಐಗೆ ವಹಿಸಲಾಗಿದೆ, ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದರು.

ಲಿಂಗಾಯತ ಧರ್ಮವನ್ನು ಸಿಎಂ ಒಡೆಯುತ್ತಿದ್ದಾರೆ ಎಂಬ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಯಾವುದೇ ಧರ್ಮ ಒಡೆಯುತ್ತಿಲ್ಲ, ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ, ಕೇಂದ್ರಕ್ಕೆ ಶಿಫಾರಸು ಮಾಡೋದಕ್ಕೆ ಮನವಿ ಕೊಟ್ಟಿದ್ದರು, ಈ ವೇಳೆ ಒಂದಾಗಿ ಬನ್ನಿ ಎಂದಿದ್ದೆ, ಅವರು ಬರುವುದಿಲ್ಲ ಎಂದು ಗೊತ್ತಾಗಿದೆ ಎಂದರು. ಇಂದಿರಾ ಗಾಂಧಿ ಜೈಲಿಗೆ ಹೋಗಿದ್ದರು ಎನ್ನುವ ಬಿಎಸ್ ವೈ ಹೇಳಿಕೆಗೆ, ಇಂದಿರಾ ಗಾಂಧಿ ಲಂಚ ತೆಗೆದುಕೊಂಡು ಜೈಲಿಗೆ ಹೋಗಿಲ್ಲ, ಆದರೆ ಬಿಎಸ್ ವೈ ಚೆಕ್ ಮೂಲಕ ಲೂಟಿ ಹೊಡೆದು ಜೈಲಿಗೆ ಹೋಗಿದ್ದಾರೆ ಎಂದು ಚಾಟಿ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Siddaramaiah yeddyurappa ಲಿಂಗಾಯತ ಇಂದಿರಾ ಗಾಂಧಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ