ನಡುರಸ್ತೆಯಲ್ಲೇ ಯುವಕನಿಗೆ ಗೂಸ

villagers beat a young man on Road

14-12-2017

ದಾವಣಗೆರೆ: ಯುವತಿಯನ್ನು ಚುಡಾಯಿಸುತ್ತಿದ್ದ ಯುವಕನೊಬ್ಬನಿಗೆ ಗ್ರಾಮಸ್ಥರೇ ಸರಿಯಾಗಿ ಗೂಸಾ ನೀಡಿದ್ದಾರೆ. ಘಟನೆಯು ದಾವಣಗೆರೆ ಜಿಲ್ಲೆಯ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ. ದಾವಣಗೆರೆಯ ನಿಟ್ಟುವಳ್ಳಿಯ ನಾಲ್ವರು ಯುವಕರು, ಮದ್ಯಪಾನ ಮಾಡಿ ಆಟೋದಲ್ಲಿ  ಲಿಂಗದಳ್ಳಿಗೆ ಬಂದಿದ್ದರು. ಇನ್ನು ಈ ವೇಳೆ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಚುಡಾಯಿಸಿ ಕಿರುಕುಳ ನೀಡಿದ್ದಾರೆ. ಇದನ್ನು ಪ್ರಶ್ನಿಸಿದ ಗ್ರಾಮಸ್ಥರ ಮೇಲೆಯೇ ಈ ನಾಲ್ವರು ಪುಂಡರು ಹಲ್ಲೆಗೆ ಮುಂದಾಗಿದ್ದರು. ಇನ್ನು ಈ ವೇಳೆ ಗ್ರಾಮಸ್ಥರು ಒಟ್ಟುಗೂಡಿ ಅವರನ್ನು ಹಿಡಿಯಲು ಹೋದಾಗ ನಾಲ್ವರಲ್ಲಿ ಮೂವರು ತಪ್ಪಿಸಿಕೊಂಡಿದ್ದು, ಚಂದ್ರು ಎಂಬ ಯುವಕ ಸಿಕ್ಕಿಬಿದ್ದಿದ್ದಾನೆ. ಇವನನ್ನು ಮನಬಂದತೆ ಥಳಿಸಿದ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಟೋದಲ್ಲಿ ಪರಾರಿಯಾದ ಅರುಣ್, ಗಣೇಷ್, ಫಯಾಜ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Harassment Davanagere ಕಿರುಕುಳ ಪರಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ