ಶಿವಮೊಗ್ಗದ ಸಾಗರ ಬಂದ್

shimoga sagara Bandh

14-12-2017

ಶಿವಮೊಗ್ಗ: ಪರೇಶ್ ಮೇಸ್ತ ಸಾವು ಖಂಡಿಸಿ, ಹಿಂದೂಪರ ಸಂಘಟನೆಗಳಿಂದ ಶಿವಮೊಗ್ಗದ ಸಾಗರ ಪಟ್ಟಣ ಬಂದ್ ಗೆ ಕರೆ ನೀಡಿದ್ದು, ಸಾಗರ ಪಟ್ಟಣದಲ್ಲಿಂದು, ಸಂತೆ ಸೇರಿದಂತೆ, ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಇನ್ನು ಸಾಗರ ಪಟ್ಟಣದಲ್ಲಿ 144 ಸೆಕ್ಷನ್ ಜಾರಿ ಮಾಡಿ, ಉಪವಿಭಾಗಾಧಿಕಾರಿ ನಾಗರಾಜ್ ಸಿಂಗ್ರೇರ್ ಆದೇಶ ಹೊರಡಿಸಿದ್ದಾರೆ. ಬಂದ್ ಹಿನ್ನೆಲೆ ಪೊಲೀಸ್ ಇಲಾಖೆಯಿಂದ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಕೈಗೊಂಡಿದ್ದಾರೆ, ಮತ್ತು ಪಟ್ಟಣದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಎಸ್ಪಿ ಅಭಿನವ್ ಖರೆ ನೇತೃತ್ವದಲ್ಲಿ ನಿನ್ನೆ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತ ಪಥ ಸಂಚಲನ ನಡೆದಿತ್ತು. ಇನ್ನು ಬಂದ್ ಗೆ ರೈತ ಸಂಘ ಸೇರಿದಂತೆ ಇತರರಿಂದ ವಿರೋಧ ವ್ಯಕ್ತವಾಗಿದೆ.


ಸಂಬಂಧಿತ ಟ್ಯಾಗ್ಗಳು

Bandh shimoga sagara ರೈತ ಸಂಘ ಹಿಂದೂಪರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ