ಮುಂದಿನ ದಿನಗಳಲ್ಲಿ ಎಪಿಎಲ್ , ಬಿಪಿಎಲ್ ಯಶಸ್ವಿನಿ ನಂತಹ ಆರೋಗ್ಯ ಕಾರ್ಡ್ ಇರಲ್ಲ..!

Kannada News

13-04-2017

ಕೋಲಾರ ; ರಾಜ್ಯದ ಎಲ್ಲಾ ಎಪಿಎಲ್ ಬಿಪಿಎಲ್ ಯಶಸ್ವಿನಿ ನಂತಹ ಎಲ್ಲಾ ಆರೋಗ್ಯ ಕಾಡ್೯ಗಳನ್ನು ತೆಗೆದು ಹಾಕಲಾಗುತ್ತದೆ. ಮುಂದಿನ ದಿನಗಳಲ್ಲಿ ಯೂನಿವರ್ಸಲ್ ಹೆಲ್ತ್ ಕಾಡ್೯ ಜಾರಿಗೊಳಿಸಲಾಗುವುದು. ಸುಮಾರು ೧.೫ ಕೋಟಿ ಕುಟುಂಬಗಳಿಗೆ ಈ ಸೌಲಭ್ಯ ಸಿಗಲಿದೆ. ಆದ್ರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಯೋಜನೆಗಳಿಗೆ ಮಾತ್ರ. ಆಧಾರ್ ಕಾಡ್೯ ಆಧಾರದ ಮೇಲೆ ಯೂನಿವರ್ಸಲ್ ಕಾಡ್೯ ವಿತರಣೆ, ಮಂತ್ರಿಗಳು ಸೇರಿ ಎಲ್ಲಾ ಜನ ಸಾಮಾನ್ಯರಿಗೂ ಇದು ಅನ್ವಯ. ಎಲ್ಲರೂ ಒಂದೇ ನಾವು ಖಾಸಗಿಗೆ ಹೋಗೋದು, ಬಡವರು ಸರ್ಕಾರಿ ಆಸ್ಪತ್ರೆಗೆ ಹೋಗುವ ತಾರತಮ್ಯ ಇನ್ನು ಮುಂದೆ ಇರಬಾರದು. ಇದಕ್ಕೆ ಎಲ್ಲರ ಸಮ್ಮತಿ ಅಗತ್ಯ ಎಂದು ಕೋಲಾರದಲ್ಲಿ ಸಚಿವ ರಮೇಶ್ ಕುಮಾರ್ ಹೇಳಿಕೆ ನೀಡಿದರು. ಅಷ್ಟೇ ಅಲ್ಲದೇ ಸ್ವಾಭಿಮಾನಿ ರೈತನಿಗೆ ಪೂರಕ ವಾತಾರಣ ನಿರ್ಮಿಸ ಬೇಕು. ಸಾಲ ಮನ್ನಾದಿಂದ ರೈತ ಉದ್ದಾರ ಅಗುತ್ತಾನೆ ಅಂದ್ರೆ ಮಾಡೋಣ. ಉಪಚುನಾವಣೆ ಗೆಲುವು ಸ್ಥಳೀಯವಾಗಿ ಜನ ತೀಮಾರ್ನ, ಹಣ ಇದ್ದವ್ರು ಗೆಲ್ತಾರೆ ಇಲ್ಲದವ್ರು ಸೋಲ್ತಾರೆ ಅನ್ನೋದು ಮಾಮೂಲಿ ಮಾತಾಗಿದೆ. ಶ್ರೀನಿವಾಸಪ್ರಸಾದ್ ನಮ್ಮ ಗೆಳೆಯ ಪಕ್ಷತೊರೆದ ಬಗ್ಗೆ ದುಖಃ ಇದೆ. ಕೊನೆಗೆ ಜನ್ರ ತೀರ್ಮಾನಕ್ಕೆ ಎಲ್ಲರೂ ತಲೆ ಬಾಗಲೇಬೇಕು ಎಂದು ಕೋಲಾರದಲ್ಲಿ ಸಚಿವ ರಮೇಶ್ ಕುಮಾರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ