ರಾಜ್ಯದ ವಿವಿಧೆಡೆ ಎಸಿಬಿ ದಾಳಿ

ACB raid in belagavi,Tumkur, Kalburgi

13-12-2017

ಬೆಂಗಳೂರು: ನಗರದ ಕಾರ್ಮಿಕ ಭವನದ ಫ್ಯಾಕ್ಟರಿ ಅಂಡ್ ಬಾಯ್ಲರ್‍ ನ ಜಂಟಿ ನಿರ್ದೇಶಕ ವಾಸಣ್ಣ, ಯೋಜನಾ ವಿಭಾಗದ ಜಂಟಿ ನಿರ್ದೇಶಕ ಎಂ.ಸಿ ಶಶಿಕುಮಾರ್, ಬಿಬಿಎಂಪಿಯ ಬಸವನಗುಡಿ ಸಹಾಯಕ ಇಂಜಿನಯರ್ ತ್ಯಾಗರಾಜ್, ವಿಜಯನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶೇಕ್ಷಾವಲಿ ಸೇರಿದಂತೆ 11 ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿ ಪತ್ತೆಹಚ್ಚಿದ್ದಾರೆ.

ಬೆಂಗಳೂರು, ಮಂಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ಧಾರವಾಡ, ಬೆಳಗಾಂ, ಬಳ್ಳಾರಿ ಸೇರಿ ರಾಜ್ಯದ ವಿವಿಧ ಕಡೆ ಏಕಕಾಲಕ್ಕೆ ದಾಳಿ ನಡೆ ನೀರಾವರಿ, ಕೃಷಿ, ಅರಣ್ಯ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ 11 ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿ, ಅವರ ಕಚೇರಿ ಮನೆಗಳು, ಸಂಬಂಧಿಕರ ಮನೆಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿ-ಪಾಸ್ತಿಯನ್ನು ಪತ್ತೆ ಹಚ್ಚಲಾಗಿದೆ.

ಬಲೆಗೆ ಬಿದ್ದಿರುವ ಅಧಿಕಾರಿಗಳು ಆದಾಯ ಮೀರಿ ನೂರಾರು ಪಟ್ಟು ಅಕ್ರಮ ಆಸ್ತಿ-ಪಾಸ್ತಿಗಳಿಸಿರುವುದು ದಾಳಿಯ ವೇಳೆ ಕಂಡು ಬಂದಿದೆ. ಭ್ರಷ್ಟ ಅಧಿಕಾರಿಗಳಿಂದ ವಶಪಡಿಸಿಕೊಂಡಿರುವ ಅಕ್ರಮ ಆಸ್ತಿ-ಪಾಸ್ತಿಯ ಪರಿಶೀಲನೆ ನಡೆಸಲಾಗಿದೆ ಎಂದು ಎಸಿಬಿಯ ಪೊಲೀಸ್ ಮಹಾ ನಿರೀಕ್ಷಕ (ಐಜಿಪಿ) ಕೆ.ವಿ ಶರತ್‍ಚಂದ್ರ ಅವರು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಮಲ್ಲಪ್ಪ ಅವರ ಕಚೇರಿ, ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿ-ಪಾಸ್ತಿಯ ದಾಖಲೆಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಮಲ್ಲಪ್ಪ ಅವರ ಶಿವಮೊಗ್ಗದ ಸಾಗರ ರಸ್ತೆಯ ಶರಾವತಿ ನಗರದ ಮನೆಯ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ಹಿಂದೆ ಗುಲ್ಬರ್ಗದಲ್ಲಿ ಸಣ್ಣ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಆಗಿದ್ದ ಮಲ್ಲಪ್ಪ ಅವರ ಅಕ್ರಮ ಆಸ್ತಿ ಗಳಿಕೆಯ ಬಗ್ಗೆ ದೂರುಗಳು ಬಂದಿದ್ದವು.

ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ವಾಡ) ಆಯುಕ್ತ ಶೇಕ್ಷಾವಲಿ ಅವರ ಬಳ್ಳಾರಿಯ ಕುವೆಂಪು ನಗರದ ಮನೆ, ಈದ್ಗಾ ಮೈದಾನದ ಬಳಿ ಇರುವ ಮನೆ ಸೇರಿ ಮೂರು ಮನೆಗಳು, ತೋರಣಗಲ್‍ನಲ್ಲಿರುವ ವಾಡ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ.

ಶೇಕ್ಷಾವಲಿ ಅವರು ಹಿಂದೆ ಬಳ್ಳಾರಿಯ ನಗರಾಭಿವೃದ್ಧಿ ಆಯುಕ್ತರಾಗಿಯು ಕಾರ್ಯನಿರ್ವಹಿಸಿದ್ದ ವೇಳೆ ಲೋಕಾಯುಕ್ತ ದಾಳಿಗೊಳಗಾಗಿ ಸೇವೆಯಿಂದ ಅಮಾನತುಗೊಂಡು ನಂತರ ವಾಡ ಆಯುಕ್ತರಾಗಿ ನೇಮಕಗೊಂಡಿದ್ದರು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ವಿಭಾಗದ ಸಣ್ಣ ನೀರಾವರಿ ಇಲಾಖೆಯ ಎಸಿಎಫ್ ಪಾಂಡುರಂಗ ಪೈ ಅವರ  ಹುಬ್ಬಳ್ಳಿಯಲ್ಲಿನ ಗಂಗಾಧರ ಲೇಔಟ್‍ನ ಮನೆ, ಧಾರವಾಡದ ಸಿಲ್ವರ್ ಆರ್ಕೆಟ್ ಬಡಾವಣೆಯ ಮನೆ ಸೇರಿ 2 ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ-ಪಾಸ್ತಿ ಪತ್ತೆಹಚ್ಚಲಾಗಿದೆ.

ಬೆಳಗಾವಿಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್‍ಭೀಮಾ ನಾಯಕರ ಅವರ ಬೆಳಗಾವಿ, ಖಾನಪುರ, ಕಿತ್ತೂರು ಸೇರಿದಂತೆ 4 ಮನೆಗಳು, ಕಚೇರಿಗಳ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿಯ ದಾಖಲೆಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿದೆ ಎಂದು ಎಸಿಬಿಯ ಪೆÇಲೀಸ್ ಮಹಾ ನಿರ್ದೇಶಕ (ಐಜಿಪಿ) ಶರತ್‍ಶ್ಚಂದ್ರ ಅವರು ತಿಳಿಸಿದ್ದಾರೆ.

ಬಂಟ್ವಾಳದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಎಫ್ ನಿರಾಂಡ ಅವರ ಕಚೇರಿ, ಬಂಟ್ವಾಳದ ನಿವಾಸ, ಸಹೋದರನ ತೋಕುರಿನಲ್ಲಿರುವ ಮನೆಗಳ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ-ಪಾಸ್ತಿ ಪತ್ತೆ ಹಚ್ಚಲಾಗಿದೆ. ನಿರಾಂಡ ಅವರು ಕೃಷಿ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ನಡೆಸಿದ್ದಾರೆ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ದಾಳಿ ನಡೆಸಿ ಅಕ್ರಮ ಆಸ್ತಿ-ಪಾಸ್ತಿ ಪರಿಶೀಲನೆ ನಡೆಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

ACB Property ನೀರಾವರಿ ಇಲಾಖೆ ಎಂಜಿನಿಯರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ