ಸಿ.ಪಿ.ಯೋಗೇಶ್ವರ್ ಗೆ ಜೆಡಿಎಸ್ ಎಚ್ಚರಿಕೆ...!13-12-2017

ರಾಮನಗರ: ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ, ಚನ್ನಪಟ್ಟಣ ಯುವ ಜೆಡಿಎಸ್ ಘಟಕ ಆಕ್ರೋಶ ವ್ಯಕ್ತಪಡಿಸಿದೆ. ಚನ್ನಪಟ್ಟಣ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಯುವ ಮುಖಂಡರು, ಕಳೆದ ದಿನ ರಾಮನಗರದ ಖಾಸಗಿ ಹೋಟೆಲ್ ನಲ್ಲಿ ಯೋಗೇಶ್ವರ್ ಅವರು, ಸುದ್ದಿಗೋಷ್ಟಿ ನಡೆಸಿ ಜೆಡಿಎಸ್ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ ವಿರುದ್ಧ ಹಗುರವಾಗಿ ಮಾತನಾಡಿದ್ದಕ್ಕೆ ಜೆಡಿಎಸ್ ಮುಖಂಡರು ಚಾಟಿ ಬೀಸಿದ್ದರೆ.

ಇಂದು, ರಾಮನಗರ ಜಿಲ್ಲಾ ಜೆಡಿಎಸ್ ನ ಮಹಾಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಅವರ ನೇತೃತ್ವದಲ್ಲಿ, ನಡೆದ ಸುದ್ದಿಗೋಷ್ಟಿಯಲ್ಲಿ, ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಹಾಗೂ ನಾಯಕರ ವಿರುದ್ಧ ಮಾತನಾಡದಿರಲು, ಯುವ ಘಟಕದ ಮುಖಂಡರು ಸಿ.ಪಿ.ಯೋಗೇಶ್ವರ್ ಗೆ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ, ಚನ್ನಪಟ್ಟಣ ತಾಲ್ಲೂಕು ಯುವ ಘಟಕದ ಅಧ್ಯಕ್ಷ ವಿನೋದ್ ಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ