‘ಟಿಪ್ಪುವಿನ ಪುನರ್ಜನ್ಮದಂತೆ ಸಿಎಂ ವರ್ತನೆ'

13-12-2017 334
ಬೆಂಗಳೂರು: ವಿಧಾನಸೌಧದ ಬಿಜೆಪಿ ಶಾಸಕಾಂಗ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಸಂಸದೆ ಶೋಭಾ ಕರಂದ್ಲಾಜೆ ಅವರು, ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೃಹ ಸಚಿವರು ಪರೇಶ್ ಮೇಸ್ತ ಹತ್ಯೆ ವಿಚಾರವನ್ನು ಸಣ್ಣ ವಿಚಾರ ಅಂದಿದ್ದಾರೆ, ಗೃಹ ಸಚಿವರ ಈ ಹೇಳಿಕೆ ಸರಿಯಲ್ಲ, ಪರೇಶ್ ಮೇಸ್ತ ಸತ್ತಿರುವುದು ಗೃಹ ಸಚಿವರಿಗೆ ಸಣ್ಣ ಸಂಗತಿ, ಇದು ಬೇಜವಾಬ್ದಾರಿಯ ಪರಮಾವಧಿ, ಈ ಹೇಳಿಕೆ ಗೃಹ ಸಚಿವರಿಗೆ ಶೋಭೆ ತರಲ್ಲ ಎಂದರು.
ಪರೇಶ್ ಮೇಸ್ತ ಮರಣೋತ್ತರ ಪರೀಕ್ಷೆ ಮಾಡಲು ಹೋದ ವೈದ್ಯರು ನಾಪತ್ತೆ ಯಾಗಿದ್ದಾರೆ, ವೈದ್ಯರು ಮಣಿಪಾಲದಲ್ಲಿ ಇಲ್ಲ, ಸರ್ಕಾರವೇ ಸ್ವತಃ ವೈದ್ಯರಿಗೆ ಧಮಕಿ ಹಾಕಿದೆ ಅಂತ ಅನ್ನಿಸುತ್ತಿದೆ ಎಂದು ಆರೋಪಿಸಿ, ಮಣಿಪಾಲ ಆಸ್ಪತ್ರೆ ಪ್ರತಿಷ್ಠೆಯ ಆಸ್ಪತ್ರೆ, ಮಣಿಪಾಲ ಆಸ್ಪತ್ರೆಯ ಆಡಳಿತ ವರ್ಗ ನಿರ್ಭೀತಿಯಿಂದ ವರದಿ ಬಿಡುಗಡೆ ಮಾಡಬೇಕು, ಫಾರೆನ್ಸಿಕ್ ಮತ್ತು ಮರಣೋತ್ತರ ವರದಿಯನ್ನು ಆಸ್ಪತ್ರೆ ಆಡಳಿತ ವರ್ಗ ನಿರ್ಭೀತಿಯಿಂದ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪರೇಶ್ ಮೇಸ್ತ ಮೀನುಗಾರ, ಅವನು ಕೆರೆಯಲ್ಲಿ ಬಿದ್ದು ಸಾಯೋದಕ್ಕೆ ಸಾಧ್ಯವಿಲ್ಲ, ಸಮುದ್ರದಲ್ಲಿ ಈಜುವವನು, ಕೆರೆಯಲ್ಲಿ ಹೇಗೆ ಮುಳುಗ್ತಾನೆ, ಅವನ ಮರ್ಮಾಂಗಕ್ಕೆ ಹಾನಿಯಾಗಿತ್ತು, ಕೈಮೇಲೆ ಇದ್ದ ಜೈ ಶ್ರೀರಾಮ ಎನ್ನುವುದನ್ನು ಜಜ್ಜಲಾಗಿದೆ, ಎಲ್ಲ ಕೇಸನ್ನು ಮುಚ್ಚಿಹಾಕುವ ಹಾಗೆ ಈ ಕೇಸ್ ಕೂಡ ಮುಚ್ಚಿಹಾಕಲು ಸರ್ಕಾರ ಮುಂದಾಗಿದೆ ಎಂದರು.
ಟಿಪ್ಪುವಿನ ಪುನರ್ಜನ್ಮದಂತೆ ಸಿಎಂ ವರ್ತಿಸುತ್ತಿದ್ದಾರೆ, ಡಿಸೆಂಬರ್ 15 ರಂದು ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಈ ಪ್ರಕರಣವನ್ನು ಎನ್.ಐ.ಎ ತನಿಖೆಗೆ ಕೊಡಲು ಒತ್ತಾಯಿಸುತ್ತೇವೆ, ಪಿಎಫ್ಐ ಇದರ ನೇರ ಹೊಣೆ ಹೊರಬೇಕಾಗುತ್ತದೆ. ಕರಾವಳಿ ಭಾಗದಿಂದ ಐಸಿಸ್ ಗೆ ನೇಮಕ ಆಗ್ತಿದೆ ಅಂತ ವರದಿಗಳು ಬರ್ತಿವೆ, ಪಿಎಫ್ಐಗೂ ಇದಕ್ಕೂ ಸಂಬಂಧ ಇದೆ, ಪಿಎಫ್ಐ ಸಂಘಟನೆಯನ್ನು ದೇಶದ ಭದ್ರತೆ ದೃಷ್ಟಿಯಿಂದ ನಿಷೇಧಿಸಬೇಕು ಎಂದಿದ್ದಾರೆ.
ಒಂದು ಕಮೆಂಟನ್ನು ಹಾಕಿ