24 ತಿಂಗಳು ಹೆರಿಗೆ ರಜೆ…

Tripura: women staff to get 24-month maternity leave

13-12-2017

ಇತ್ತೀಚಿನ ವರ್ಷಗಳಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಎಲ್ಲಾ ಉದ್ಯೋಗಸ್ಥ ಮಹಿಳೆಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದವರು 6 ತಿಂಗಳವರೆಗೆ ಹೆರಿಗೆ ರಜೆ ನೀಡುತ್ತಾರೆ. ಕೇಂದ್ರ ಸರ್ಕಾರದ, ಮಾತೃತ್ವ ಅನುಕೂಲ ಕಾಯಿದೆಯಡಿ ಖಾಸಗಿ ಸಂಸ್ಥೆಯವರೂ ಕೂಡ ಇದನ್ನು ಪಾಲಿಸುವುದು ಕಡ್ಡಾಯ.

ಆದರೆ, ಇದೀಗ ತ್ರಿಪುರಾ ಸರ್ಕಾರ ತನ್ನ ಮಹಿಳಾ ಉದ್ಯೋಗಿಗಳಿಗೆ 24 ತಿಂಗಳು, ಹೌದು 2 ವರ್ಷ ಹೆರಿಗೆ ರಜ ನೀಡಲು ನಿರ್ಧರಿಸಿದೆ. ಮಾಣಿಕ್ ಸರ್ಕಾರ ಅವರ ಎಡರಂಗ ಸರ್ಕಾರ, ಈ ನಿರ್ಧಾರ ಪ್ರಕಟಿಸಿದ್ದು, ಮೊದಲ ಎರಡು ಮಕ್ಕಳಿಗೆ ಮಾತ್ರ ಈ ಹೆರಿಗೆ ರಜೆ ಸೌಲಭ್ಯ ಅನ್ವಯವಾಗಲಿದೆ. ಇಲ್ಲಿರುವ ಇನ್ನೂ ಒಂದು ದೊಡ್ಡ ಅನುಕೂಲವೆಂದರೆ, ಈ ಎರಡು ವರ್ಷಗಳ ಹೆರಿಗೆ ರಜೆಯನ್ನು, ಒಂದೇ ಬಾರಿ ತೆಗೆದುಕೊಳ್ಳಬಹುದು ಅಥವ ಆ ಮಗುವಿಗೆ 18 ವರ್ಷ ವಯಸ್ಸಾಗುವವರೆಗೆ ಆಗಾಗ ಅಗತ್ಯಬಿದ್ದಾಗಲೆಲ್ಲ ತೆಗೆದುಕೊಳ್ಳಬಹುದು.

ತಮ್ಮ ಕಿವಿಗಳಿಗೆ ತುಂಬಾ ಆನಂದ ತರುವ ಈ ಸುದ್ದಿ ಕೇಳಿದ ರಾಜ್ಯದ ಉದ್ಯೋಗಸ್ಥ ಮಹಿಳೆಯರು, ಇಲ್ಲೂ ಕೂಡ ಅದೇ ರೀತಿ ರಜೆ ಸೌಲಭ್ಯ ಜಾರಿಗೆ ತರಲು ಸರ್ಕಾರವನ್ನು ಆಗ್ರಹಿಸುವ ಬಗ್ಗೆ ಯೋಚಿಸುತ್ತಿದ್ದಾರಂತೆ. ಸರಿ, ಇಷ್ಟಾದ ಮೇಲೆ ಗಂಡಸರು ಸುಮ್ಮನಿರುತ್ತಾರೆಯೇ, ಮಹಿಳೆಯರಂತೆ ನಮಗೂ ಕೂಡ, ಅವರಿಗೆ ಕೊಡುವುದರಲ್ಲಿ ಅರ್ಧದಷ್ಟು ದಿನಗಳಾದರೂ ಪಿತೃತ್ವ ರಜೆ ನೀಡುವಂತೆ ಒತ್ತಾಯಿಸಬಹುದೇನೋ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ