'ಹಿಂದೂಗಳ ಮೇಲೆ ಪೊಲೀಸ್ ದಬ್ಬಾಳಿಕೆ’13-12-2017

ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ಚಾಮುಂಡಿ ತಾಯಿ ಮೇಲೆ ಪ್ರಮಾಣ ಮಾಡಿ ಹೇಳಲಿ, ಅವತ್ತು ಪರೇಶ್ ಮೇಸ್ತ ಕೊಲೆಯಾಗಿದ್ದು ಗೊತ್ತಿಲ್ಲ ಅಂತ ಹೇಳಿದ್ರು, ಈ ಕುರಿತು  ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಿ ನಿಜ ಹೇಳಲಿ ಎಂದು, ವಿಧಾನ ಪರಿಷತ್ ವಿಪಕ್ಞಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡ್ತಾ ಇಲ್ಲ. ಆತನ ಶವದ ಮೇಲೆ ಕಾಂಗ್ರೆಸ್ ರಾಜಕೀಯ ಮಾಡ್ತಾ ಇದೆ ಎಂದುರು.

ಪೊಲೀಸ್ ಇಲಾಖೆಯನ್ನು ಕಾಂಗ್ರೆಸ್ ಸರಕಾರ ದರ್ಬಳಕೆ ಮಾಡಿಕೊಳ್ಳುತ್ತಿದೆ, ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಪತ್ನಿ ಚುನಾವಣೆಗೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ರಾಷ್ಟಭಕ್ತ ಹಿಂದೂ ಯುವಕರ ಕಗ್ಗೊಲೆಯನ್ನ ನಾವು ಸಹಿಸಲ್ಲ, ಹಿಂದೂಗಳ ಮೇಲೆ ಪೊಲೀಸ್ ಇಲಾಖೆ ದಬ್ಬಾಳಿಕೆ ಮಾಡಿತ್ತಿದೆ ಎಂದು ಆಕ್ರೋಶದಿಂದ ನುಡಿದರು.

ಇದೇ ತಿಂಗಳ 18 ರಂದು ಹೊನ್ನಾವರದಲ್ಲಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದು, ಜಗದೀಶ್ ಶೆಟ್ಟರ್ ಸಹ ಪಾಲ್ಗೊಳ್ಳಲಿದ್ದಾರೆ. ಕೊಲೆಗೊಡಕುರನ್ನು ಬಂಧಿಸಬೇಕು ಎಂದ ಅವರು, ಸಿದ್ದರಾಮಯ್ಯ ಹೊನ್ನಾವರದಲ್ಲಿ ಇದ್ದಾಗ ಕೊಲೆ ನಡೆದಿತ್ತೋ ಇಲ್ವೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.  ಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆ ಕೇಳಲಿ, ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.

ಇನ್ನು ನಟ ಪ್ರಕಾಶ ರೈ ಕುರಿತು ಹೇಳಿಕೆಗೆ, ಕೆಲವರು ಅವರೇ ವಿಚಾರವಾದಿಗಳು ಎಂದು ಘೋಷಿಸಿಕೊಂಡಿದ್ದಾರೆ. ಹಿಂದೂ ಸಂಘಟನೆಗಳ ವಿರುದ್ದ ಟಿಕೀಸುವುದನ್ನು ಫ್ಯಾಶನ್ ಮಾಡಿ ಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

k.s eshwarappa paresh mestha ಐಜಿಪಿ ರಾಷ್ಟಭಕ್ತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ