ಸಚಿವರ ವಿರುದ್ಧ ಸ್ವಾಮೀಜಿ ವಾಗ್ದಾಳಿ13-12-2017

ಗದಗ: ಕೆಲ ಮಠಾಧೀಶರು ಸರ್ಕಾರದ ಹಣ ಆಮಿಶಕ್ಕೆ ಒಳಗಾಗಿ ಸಮಾಜ ಒಡೆಯುವ ದುಸ್ಸಾಹಸಕ್ಕೆ ಮುಂದಾಗಿದ್ದಾರೆ ಎಂದು, ಹಾಲಕೇರಿ ಅನ್ನದಾನೇಶ್ವರ ಶ್ರೀಗಳು ಗಂಭೀರ ಆರೋಪ ಮಾಡಿದ್ದಾರೆ. ಗದಗ್ ನಲ್ಲಿ ನಡೆದ ವೀರಶೈವ ಲಿಂಗಾಯತ ‌ಜನಜಾಗೃತಿ ಪಾದಯಾತ್ರೆ ಬಳಿಕ ಮಾತನಾಡಿದ ಅವರು, ಕಲ ಸಚಿವರು ಮತ್ತು ಮಠಾಧೀಶರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವೀರಶೈವ-ಲಿಂಗಾಯತ ಒಂದೇ, ಕೆಲ ಸಂಕುಚಿತ ಮನೋಭಾವದ ಮಠಾಧೀಶರು, ಮುಖಂಡರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಮಾಜ ಒಡೆಯುವ ಸ್ವಾರ್ಥ ಸಾಧನೆ ಯಶಸ್ವಿಯಾಗಲ್ಲ ಎಂದು, ಪರೋಕ್ಷವಾಗಿ ಸಚಿವರಾದ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ ವಿರುದ್ಧ ಶ್ರೀಗಳು ಕಿಡಿಕಾರಿದ್ದಾರೆ.

ರಾಜಕೀಯ ಲಾಭ ಪಡೆಯಲು ಸರ್ಕಾರ ಸಚಿವರ ಮೂಲಕ ಸಮಾಜ ಇಬ್ಬಾಗ ಮಾಡುವ ಯತ್ನ ನಡೆಸಿದೆ, ಸಚಿವರ, ಕೆಲ ಮಠಾಧೀಶರ ಸಂಚು ಸಮಾಜದ ಜನರಿಗೆ ಗೋತ್ತಾಗಿದೆ, ಸ್ವತಂತ್ರ ಧರ್ಮ ಪರ ಹೋರಾಟ ಮಾಡುತ್ತಿರೋ ಮಠಾಧೀಶರ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ 50 ಲಕ್ಷ ಅನುದಾನ ನೀಡುವ ಆಮಿಷ ಒಡ್ಡಿದೆ, ಸಾಕಷ್ಟು ಮಠಾಧೀಶರಿಗೆ ಪರೋಕ್ಷವಾಗಿ ಹಣದ ಆಮಿಷ ಒಡ್ಡಿದ್ದಾರೆ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ