ಜನಜಾಗೃತಿ ಪಾದಯಾತ್ರೆ

veerashaiva lingayat padayatre

13-12-2017

ಗದಗ: ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಹಿನ್ನೆಲೆ, ಗದಗ್ ನಲ್ಲಿ  ವೀರಶೈವ ಲಿಂಗಾಯತ ಜನಜಾಗೃತಿಗಾಗಿ ಬೃಹತ್ ಪಾದಯಾತ್ರೆ ನಡೆಸಿದ್ದಾರೆ. ಗದಗ್ ನ ಹಾಳಕೇರಿ ಅನ್ನದಾನೀಶ್ವರ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದ್ದಾರೆ. ಪಾದಯಾತ್ರೆಯಲ್ಲಿ ಹೊಸಳ್ಳಿ ಭೂದೀಶ್ವರ ಶ್ರೀಗಳು, ಬಾಲೆಹೊಸೂರ ದಿಂಗಾಲೇಶ್ವರ ಶ್ರೀಗಳು, ಕೊಟ್ಟೂರು ಬಸವೇಶ್ವರ ಶಿವಾಚಾರ್ಯ, ಅಡ್ನೂರ ಪಂಚಾಕ್ಷರಿ ಶಿವಾಚಾರ್ಯರು ಸೇರಿದಂತೆ 10 ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದಾರೆ. ಕುಂಭಮೇಳದೊಂದಿಗೆ ಪಾದಯಾತ್ರೆ ಮಾಡುತ್ತಿದ್ದು, ಸಾವಿರಾರು ಭಕ್ತರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ನಗರದ ರಾಚಟೇಶ್ವರ ದೇವಸ್ಥಾನದಿಂದ ಮೂರು ವಾರ್ಡ್ ಗಳಲ್ಲಿ ಪಾದಯಾತ್ರೆ ಮೂಲಕ ಜನಜಾಗೃತಿಗೆ ಪಾದಯಾತ್ರೆಯನ್ನು, ವೀರಶೈವ ಲಿಂಗಾಯತ ಒಂದೇ ಧರ್ಮ ಎಂದು ಜಯ ಘೋಷದೊಂದಿ ಆರಂಭಸಿದ್ದಾರೆ.

ಡಿಸೆಂಬರ್ 24 ರಂದು ಗದಗ ನಗರದಲ್ಲಿ ನಡೆಯುವ ವೀರಶೈವ ಲಿಂಗಾಯಯತ ಧರ್ಮದ ಜನಜಾಗೃತಿ ಬೃಹತ್ ಸಮಾವೇಶ ಆಯೋಜಿಸಿದ್ದು, ಸಮಾವೇಶ ಹಿನ್ನೆಲೆ 11 ದಿನ ಗದಗದ ಬೆಟಗೇರಿ ಅವಳಿ ನಗರದಲ್ಲಿ ಪಾದಯಾತ್ರೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

veerashaiva lingayat dingaleswara ಭೂದೀಶ್ವರ ಜನಜಾಗೃತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ