ಚುನಾವಣೆಗೆ ಮುನ್ನ ಯಡಿಯೂರಪ್ಪ ಔಟ್...!

yeddyurappa v/s BJP

13-12-2017

ಒಲ್ಲದ ಮನಸ್ಸಿಂದ ಯಡಿಯೂರಪ್ಪ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದ ಪಕ್ಷದ ವರಿಷ್ಠರಿಗೆ ಆನಂತರ ಯಡಿಯೂರಪ್ಪ ಅವರು ನುಂಗಲಾರದ ತುತ್ತಾಗಿಬಿಟ್ಟರು. ತಮ್ಮದೇ ಶೈಲಿಯ ರಾಜಕೀಯ, ಗುಂಪುಗಾರಿಕೆ, ಸ್ವಜನ ಪಕ್ಷಪಾತ, ದುಡುಕಿನ ನಿರ್ಧಾರ, ಸಿಟ್ಟು ಸೆಡುವು ಮುಂತಾದ ಅವರಲ್ಲಿರುವ ದೋಷಗಳ ಕಾರಣದಿಂದಾಗಿ ಕರ್ನಾಟಕ ಬಿಜೆಪಿಯಲ್ಲಿ ಭಿನ್ನಮತ ಮತ್ತು ಗಲಾಟೆಗಳಿಗೆ ಯಡಿಯೂರಪ್ಪ ಅವರೇ ಕಾರಣರಾಗಿರುವುದು ರಹಸ್ಯವಾಗೇನೂ ಉಳಿದಿಲ್ಲ. ಆರಂಭದಿಂದಲೂ ಬರೀ ಜಾತಿ ಬೆಂಬಲ ಮತ್ತು ಜನಪ್ರಿಯತೆ ಎಂಬ ಎರಡು ವಿಷಯಗಳನ್ನೇ ಆಧಾರವಾಗಿಟ್ಟುಕೊಂಡು ಯಡಿಯೂರಪ್ಪ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ನಿಸ್ತೇಜವಾಗಿದ್ದ ಬಿಜೆಪಿ, ಆನಂತರ  ಕರ್ನಾಟಕದಲ್ಲಿ ಚೇತರಿಸಿಕೊಂಡಿತೂ ಕೂಡ. ಆದರೆ, ಭ್ರಷ್ಟಾಚಾರದ ಆರೋಪ ಹೊತ್ತ ಯಡಿಯೂರಪ್ಪ ಬಿಜೆಪಿಗೆ ಪ್ರಿಯವಾದ ಸಿಎಂ ಅಭ್ಯರ್ಥಿ ಆಗಲೇ ಇಲ್ಲ. ಕಷ್ಟಪಟ್ಟು ಸಹಿಸಿಕೊಳ್ಳಬೇಕು ಎಂಬಂತೆ ಯಡಿಯೂರಪ್ಪ ಅವರನ್ನು ಸಹಿಸಿಕೊಂಡಿತು ಬಿಜೆಪಿ. ಆದರೆ, ಚುನಾವಣಾ ಸಮಯ ಹತ್ತಿರ ಬರುತ್ತಿರುವಂತೆ ಬಿಜೆಪಿ ವರಿಷ್ಠರಿಗೆ ಆತಂಕ ಹೆಚ್ಚಾಗಿದೆ. ಯಡಿಯೂರಪ್ಪ ಅವರು ಪಕ್ಷವನ್ನು ಗೆಲುವಿನೆಡೆಗೆ ಕೊಂಡೊಯ್ಯುತ್ತಾರೆ ಎಂಬ ವಿಶ್ವಾಸ ಪಕ್ಷಕ್ಕಿಲ್ಲ. ಅದಲ್ಲದೆ ಜಾತಿ ಬೆಂಬಲವೂ ಮಾಸಿ ಹೋದಂತಿದೆ. ಜನಪ್ರಿಯತೆಯೂ ಅಷ್ಟಾಗಿ ಉಳಿದಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಯಡಿಯೂರಪ್ಪ ಅವರಲ್ಲಿ ಉತ್ಸಾಹ ಇದ್ದರೂ ಅವರಿಗೆ ಹಿಂದಿದ್ದ ದೈಹಿಕ ಸಾಮರ್ಥ್ಯ ಈಗಿಲ್ಲ. ಆದ್ದರಿಂದ ಯಡಿಯೂರಪ್ಪ ಬದಲಿಗೆ ಬೇರೆ ಯಾರನ್ನಾದರೂ ಸಿಎಂ ಅಭ್ಯರ್ಥಿಯನ್ನಾಗಿಸುವ ಚಿಂತನೆ ಬಿಜೆಪಿಯಲ್ಲಿ ನಡೆಯುತ್ತಿದೆ. ಆದರೆ, ಯಡಿಯೂರಪ್ಪ ಅವರು ಸಕ್ರಿಯ ರಾಜಕಾರಣದಲ್ಲಿದ್ದಷ್ಟೂ ದಿನ ಬಿಜೆಪಿ ಕೈಯಲ್ಲಿ ಅದು ಸಾಧ್ಯವಿಲ್ಲ. ಪ್ರತಿಭಟನೆ ಎದುರಿಸಬೇಕಾಗುತ್ತದೆ ಮತ್ತು ಹಲವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಚುನಾವಣೆ ಸಮಯದಲ್ಲಿ ಬಿಜೆಪಿಗೆ ಅದು ಬೇಕಿಲ್ಲ. ಆದ್ದರಿಂದ, ಪಕ್ಷದಲ್ಲಿ ಕೆಲವರು ಬೇರೆಯೇ ಒಂದು ತಂತ್ರವನ್ನು ಹೆಣೆಯುತ್ತಿದ್ದಾರೆ ಎನ್ನುತ್ತಿದ್ದಾರೆ ಬಿಜೆಪಿಯ ಕೆಲವು ನಾಯಕರು. ಚುನಾವಣೆ ಹತ್ತಿರವಾಗುತ್ತಿದ್ದಂತೆಯೆ ಯಡಿಯೂರಪ್ಪ ವಿರುದ್ಧದ ಕೇಸ್ ಗಳಿಗೆ ಚುರುಕು ಮುಟ್ಟಿಸಿ ನ್ಯಾಯಾಲಯಗಳಲ್ಲೂ ಯಡಿಯೂರಪ್ಪ ವಿರುದ್ಧ ತೀರ್ಪು ಬರುವಂತೆ ನೋಡಿಕೊಂಡರೆ, ಅನಾಯಾಸವಾಗಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನದಿಂದ ದೂರ ಇಡಬಹುದು ಮತ್ತು ಯಾರ ವಿರೋಧವೂ ಇಲ್ಲದೆ ತಮಗೆ ಬೇಕಾದವರನ್ನು ಆ ಸ್ಥಾನದಲ್ಲಿ ಕೂರಿಸಬಹುದು, ಹಾಗೇ ಚುನಾವಣೆ ತನಕ ಯಡಿಯೂರಪ್ಪ ಅವರನ್ನು ಪ್ರಚಾರಕ್ಕೂ ಬಳಸಿಕೊಳ್ಳಬಹುದು ಎಂದು ಹೇಳುತ್ತಾರೆ ಬಿಜೆಪಿಯ ಕೆಲವು ಚಾಣಾಕ್ಷರು.


ಸಂಬಂಧಿತ ಟ್ಯಾಗ್ಗಳು

yeddyurappa Ellection ನ್ಯಾಯಾಲಯ ಜನಪ್ರಿಯತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಈ ಲೇಖನ ಬಿಜೆಪಿಯಲ್ಲಿನ ವಸ್ತುಸ್ಥಿತಿ, ಗೊಂದಲ, ಅನಿವಾರ್ಯತೆ ಹಾಗೂ ಚಿಂತನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ.-ಸತ್ಯ
  • Sathya
  • Writer
Yodiyurappaga kootre cm aguudu doute bererigi kodi
  • bheema
If he changed who's choice bcz who is honest in party' of BJP then show to public decide otherwise party loose strength.
  • s I Patil
  • agriculture
ಅವಶ್ಯ ವಿದ್ದಾಗ ಉಪಯೊಗಿಸಿ ಒಡಿಸುವದು ಇದು ಬಿಜೆಪಿಯ ಕೆಲಸನಾ. ಅವರಿಗಿರುವಸ್ಟು ಜನಪ್ರಿಪಿಯತೆ ಇನ್ನ್ಯಾರಿಗಿದೆ ತಿಳಿಸಿ ನೊಡೊಣ. ಬಿಜೆಪಿ ಮತ್ತು ಆರಎಸೆಸ್ ಕುಮ್ಮಕ್ಕಿನಿಂದಾ ಲಿಂಗಾಯತ ಹೊರಾಟದಿಂದಾ ದುರ ವಿದ್ದಾರೆ. ಅವರನ್ನು ಹೊರಹಾಕಿದರೆ ಅಥವಾ ನಿಲ್ರಸ್ಕಸಿದರೆ ಪರಸ್ತಿ ಬಹಳ ಘಂಭಿರವಾಗುತ್ತದೆ. ಧ್ಯೆರ್ಯವಾಗಿ ಲಿಂಗಾಯತ ಧರ್ಮಕ್ಕೆ ನಿಲ್ಲುತ್ತಾರೆ ಮತ್ತು ಸಮಸ್ತ ಲಿಂಗಾಯತ ಸಮಾಜ ಅವರ ಬೆಂಬಲಕ್ಕೆ ನಿಲ್ಲುತ್ತದೆ. ಈದು ಸತ್ಯಸ ಸತ್ಯ. ಜೆ ಯಡಿಯುರಪ್ಪ.
  • ವಿರಸಿದ್ದಪ್ಪಾ
  • ನಿವ್ರುತ್ತಿ
ನಮಗೆ ಬಿಜೆಪಿ ಸರ್ಕಾರವೆ ಬೇಡ.
  • ಬಸವೇಗೌಡ
  • ರೈತ