'ನಮ್ಮಲ್ಲಿ ವೈಯಕ್ತಿಕ ದ್ವೇಷವೇನೂ ಇಲ್ಲ’-ಜೋಶಿ12-12-2017

ಹುಬ್ಬಳ್ಳಿ : ಸಚಿವ ವಿನಯ ಕುಲಕರ್ಣಿ ಹೇಳಿಕೆಗೆ ಸಂಸದ ಜೋಶಿ ತಿರುಗೇಟು ನೀಡಿದ್ದಾರೆ. ಶಿಷ್ಟಾಚಾರ ವಿಚಾರವಾಗಿ ಗರಂ ಆಗಿರುವ ವಿನಯ್ ಕುಲಕರ್ಣಿ ವಿಚಾರದ ಕುರಿತು, ಧಾರವಾಡದಲ್ಲಿ ಮಾತನಾಡಿದ ಅವರು, ನಾನು ಎಲ್ಲರನ್ನೂ ಸೇರಿಸಿ‌ ಕಾರ್ಯಕ್ರಮ ಮಾಡುತ್ತಿದ್ದೇನೆ. ಶಿಷ್ಟಾಚಾರದಂತೆ ಎಲ್ಲ ಜನಪ್ರತಿನಿಧಿಗಳನ್ನೂ ಕರೆಯೋದಕ್ಕೆ ಅಧಿಕಾರಿಗಳಿಗೆ ತಿಳಿಸಿದ್ದೇನೆ, ಅಧಿಕಾರಿಗಳಿಗೆ ಈ ಮೊದಲೇ ನಾನು ಇ-ಮೇಲ್ ಮಾಡಿ ಮನವಿ ಮಾಡಿರುವೆ ಎಂದು ತಿಳಿಸಿದರು.

ಅಧಿಕಾರಿಗಳು ಯಾಕೆ ಆಮಂತ್ರಣ ಪತ್ರಿಕೆಯಲ್ಲಿ ಸೇರಿಸಿಲ್ಲ ಅನ್ನೋ ಬಗ್ಗೆ ತಿಳಿದುಕೊಳ್ಳುವೆ, ಈ ಬಗ್ಗೆ ನಾನು ಎಲ್ಲ ದಾಖಲೆಗಳ ಸಹಿತ ಮಾಧ್ಯಮಗಳ ಮುಂದೆ ವಿಸ್ತಾರವಾಗಿ ತಿಳಿಸುತ್ತೇನೆ ಎಂದು ಹೇಳಿದರು. ಸಚಿವ ವಿನಯ ಕುಲಕರ್ಣಿಯವರ ಮನವಿಗೆ ನಾನು ಸ್ಪಂದಿಸುತ್ತೇನೆ, ನಾವು ರಾಜಕೀಯ ವಿರೋಧಿಗಳಷ್ಟೇ, ನಮ್ಮಲ್ಲಿ ವೈಯಕ್ತಿಕ ದ್ವೇಷವೇನೂ ಇಲ್ಲ, ರಾಜಕೀಯದಲ್ಲಿ ಯಾರೂ ಶತ್ರುತ್ವ ಮಾಡಬೇಕಿಲ್ಲ. ಅಭಿವೃದ್ಧಿ ‌ವಿಚಾರದಲ್ಲಿ ನಾನು ರಾಜಕೀಯ ಮಾಡಿಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

Pralhad Joshi Hubli Airport ಆಮಂತ್ರಣ ಅಧಿಕಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ