ವೇದಿಕೆಯಲ್ಲೇ ಕುಲಕರ್ಣಿ ಗರಂ...!

Minister Kulkarni express his angry on stage

12-12-2017

ಹುಬ್ಬಳ್ಳಿ: ಮೇಲ್ದರ್ಜೆಗೇರಿರುವ ಹುಬ್ಬಳ್ಳಿ‌ ವಿಮಾನ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿನಯ್ ಕುಲಕರ್ಣಿ ಕೆಂಡಾಮಂಡಲರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ, ಬಸವರಾಜ ಹೊರಟ್ಟಿ, ಪ್ರಸಾದ್ ಅಬ್ಬಯ್ಯ ಸೇರಿ ಇತರೆ ಜನಪ್ರತಿನಿಧಿಗಳ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಕೈಬಿಟ್ಟಿರೋದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿಷ್ಟಾಚಾರ ಪಾಲಿಸಿಲ್ಲವೆಂದು ವೇದಿಕೆ ಮೇಲೆಯೇ ಸಚಿವ ವಿನಯ ಕುಲಕರ್ಣಿ ಅಸಮಾಧಾನ ಹೊರಹಾಕಿದ್ದು, ಸರ್ಕಾರ ಬರ್ತವೆ, ಹೋಗ್ತವೆ ಅಭಿವೃದ್ಧಿ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬೇಡ ಎಂದಿದ್ದಾರೆ. ಈ ಹಿಂದೆ ಇಎಸ್ಐ ಆಸ್ಪತ್ರೆ ಉದ್ಘಾಟನೆ ವೇಳೆ ಇದೇ ರೀತಿಯಾಗಿತ್ತು ಎಂದರು.

ಬಸವರಾಜ ಹೊರಟ್ಟಿಯವರು ಏಳು ಸಾರಿ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದಾರೆ, ನನನ್ನೂ ಈ ಕಾರ್ಯಕ್ರಮಕ್ಕೆ ತೆರಳದಂತೆ ಹೇಳಿದ್ರೂ, ಆದರೂ ನಾನು ಬಂದಿರುವೆ, ವೇದಿಕೆಯಲ್ಲಿ ಯಾರ್ಯಾರೋ ಬಂದು ಕೂತಿದ್ದಾರೆ. ಇನ್ನು ನಾಲ್ಕೇ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ‌ಸೇರಿಸಬೇಕಿತ್ತು ಎಂದು, ನೂತನ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿಯೂ ಆಗಿರುವ ಸಚಿವ ವಿನಯ್ ಕುಲಕರ್ಣಿ ಗರಂ ಆಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ