ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಸವಣ್ಣನವರ ಹೆಸರು..?

Basavanna

12-12-2017

ಹುಬ್ಬಳ್ಳಿ: ರಸ್ತೆ‌ ಸಂಪರ್ಕ‌ ಯಾವ ರೀತಿಯೋ, ಅದೇ ರೀತಿ ವಾಯು ಮಾರ್ಗ‌ ಸಂಪರ್ಕವಾಗಬೇಕು ಎಂಬುದು, ಪ್ರಧಾನಿ ಮೋದಿ ಅವರ ಕನಸು ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಏರ್ ಬಸ್ 319 ಜೆಟ್ ವಿಮಾನ ತಂದ ಕೇಂದ್ರ ಸಚಿವದ್ವಯರಿಗೆ ಸಚಿವ ಅನಂತಕುಮಾರ್ ಅವರು, ಅಭಿನಂದನೆಗಳನ್ನು ತಿಳಿಸಿದರು. ಮೋದಿ ಸರ್ಕಾರ ಬಂದ ಮೇಲೆ ಮೂರುವರೆ ವರ್ಷದಲ್ಲಿ 3.5 ಕೋಟಿಗೂ ಹೆಚ್ಚು ಜನ ವಿಮಾನ ಪ್ರಯಾಣಿಕರಾಗಿದ್ದಾರೆ. ಎಲ್ಲ ರಾಜ್ಯ‌ ಸರ್ಕಾರಗಳಿಂದಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಮೋದಿ‌ ಸರ್ಕಾರ ‌ಹೊಸದಾಗಿ ಉಡಾನ್ ಯೋಜನೆ ಜಾರಿಗೆ ತಂದಿದೆ, ಹವಾಯಿ ಚಪ್ಪಲಿ ಹಾಕಿದ ವ್ಯಕ್ತಿ ಕೂಡ ವಿಮಾನದಲ್ಲಿ ಸಂಚರಿಸಬೇಕೆಂಬುದು ಮೋದಿ ಕನಸು ಎಂದರು. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವಣ್ಣನವರ ಹೆಸರಿಡಲು ಮನವಿ ಮಾಡಿದ್ದು, ವಿಶ್ವಗುರು ಜಗಜ್ಯೋತಿ ಬಸವೇಶ್ವರರು ಮಹಾ ಮಾನವತಾವಾದಿ, ವಿಮಾನ ನಿಲ್ದಾಣಕ್ಕೆ ಹೆಸರಿಡುವ ಕುರಿತು, ರಾಜ್ಯ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರ ಒಪ್ಪಿಗೆ ಸೂಚಿಸಲಿದೆ ಎಂದು ತಿಳಿಸಿದರು.

ಬರುವ ಐದು ವರ್ಷಗಳಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ‌ವಿಮಾನಗಳು ಹಾರಾಟ ನಡೆಸುವಂತಾಗಬೇಕು, ಮುಂಬೈ, ಬೆಂಗಳೂರಿಗೆ ಪರ್ಯಾಯವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣವಾಗಲಿದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ