ಎಂಆರ್‌ಪಿ ಮೀರಿದರೆ ಜೈಲು ಶಿಕ್ಷೆ…

Fine, Jail Term For Selling Mineral Water Above MRP

12-12-2017 294

ಹೋಟೆಲುಗಳು, ರೆಸ್ಟೋರೆಂಟ್‌ಗಳು, ಸಿನೆಮಾ ಥಿಯೇಟರ್‌ಗಳು ಅಥವ ಅಂಗಡಿಗಳಲ್ಲಿ ಮಿನರಲ್ ವಾಟರ್ ಬಾಟಲಿಗಳು, ಬಿಸ್ಕೆಟ್ ಅಥವ ಪ್ಯಾಕ್ ಆಗಿರುವ ಯಾವುದೇ ವಸ್ತುವನ್ನು ಎಂಆರ್‌ಪಿ ಅಂದರೆ ಮ್ಯಾಕ್ಸಿಮಮ್ ರೀಟೇಲ್ ಪ್ರೈಸ್ ಅಥವ ಅದರ ಮೇಲೆ ನಿಗದಿಪಡಿಸಿರುವ ಗರಿಷ್ಠ ಚಿಲ್ಲರೆ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರುವವರಿಗೆ ಶಿಕ್ಷೆ ಕಾದಿದೆ.

ಲೀಗಲ್ ಮೆಟ್ರೋಲಜಿ ಅಥವ ಮಾಪನ ಕಾಯ್ದೆಯಡಿ ಈ ರೀತಿಯ ಪ್ರಕರಣ ಪತ್ತೆಯಾದರೆ ಮೊದಲ ಅಪರಾಧಕ್ಕೆ 25 ಸಾವಿರ ರೂಪಾಯಿ ದಂಡ, ಎರಡನೇ ಅಪರಾಧಕ್ಕೆ 50 ಸಾವಿರ ರೂಪಾಯಿ ದಂಡ ಮತ್ತು ನಂತರದ ಪ್ರಕರಣಗಳಿಗೆ 1 ಲಕ್ಷ ರೂಪಾಯಿ ದಂಡ ಮತ್ತು 1 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿದೆ.

ಎಂಆರ್‌ಪಿಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವವರು ಕೇವಲ ಗ್ರಾಹಕರಿಗೆ ಮಾತ್ರವಲ್ಲ, ಸರ್ಕಾರಕ್ಕೂ ನಷ್ಟವುಂಟುಮಾಡುತ್ತಿದ್ದಾರೆ. ಪ್ಯಾಕ್ ಮಾಡಿದ ಯಾವುದೇ ಪದಾರ್ಥವನ್ನು ಅದರ ಎಂಆರ್‌ಪಿ ಅಥವ ಅದಕ್ಕಿಂತ ಕಡಿಮೆ ಬೆಲೆಗೆ ಮಾರಬೇಕು, ಅದರ ಬದಲು ಹೆಚ್ಚಿನ ಬೆಲೆಗೆ ಮಾರಿದಲ್ಲಿ, ಸರ್ಕಾರಕ್ಕೆ ಸಿಗುವ ತೆರಿಗೆಯಲ್ಲೂ ವಂಚನೆಯಾಗುತ್ತದೆ ಎಂದು ಸರ್ಕಾರ ಹೇಳಿದೆ.ಸಂಬಂಧಿತ ಟ್ಯಾಗ್ಗಳು

MRP Packed Food ಮೆಟ್ರೋಲಜಿ ಸುಪ್ರೀಂ ಕೋರ್ಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ