ಅನಂತ್ ಕುಮಾರ್ ಹೆಗಡೆ ಬಿಜೆಪಿ ಸಿಎಂ ಅಭ್ಯರ್ಥಿ..?

Ananth Kumar Hegde BJP

12-12-2017

ಮುಂದಿನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪನವರ ಬದಲಿಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರನ್ನೇ ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವ ಪ್ರಯತ್ನಗಳು ಬಿಜೆಪಿಯಲ್ಲಿ ನಡೆಯುತ್ತಿರಬಹುದು ಎಂಬ ಮಾತುಗಳಿಗೆ ಆ ಪಕ್ಷದೊಳಗೇ ಪೂರಕ ಉತ್ತರಗಳು ಬರುತ್ತಿವೆ.

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವಲ್ಲಿ ಯಡಿಯೂರಪ್ಪ ವಿಫಲರಾಗಿದ್ದಾರೆ. ಇದರ ಜೊತೆಗೆ, ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲೂ ಬಿಜೆಪಿ ಮತ್ತು ಯಡಿಯೂರಪ್ಪನವರು ತಳೆದಿರುವ ಧೋರಣೆ, ಲಿಂಗಾಯತ ಸಮುದಾಯಕ್ಕೆ ಬೇಸರ ತಂದಿದೆ. ಕಾಂಗ್ರೆಸ್‌ ಪಕ್ಷದ ಆಡಳಿತವನ್ನು ಯಾತಕ್ಕಾಗಿ ಬದಲಾಯಿಸಬೇಕು ಎಂದು ಜನರಿಗೆ ಮನದಟ್ಟು ಮಾಡಿಕೊಡುವುದರಲ್ಲೂ ಯಡಿಯೂರಪ್ಪ ಸೋಲುತ್ತಿದ್ದಾರೆ. ಹೀಗಾಗಿ, ವರ್ಚಸ್ಸು ಕಳೆದುಕೊಂಡಿರುವ ಯಡಿಯೂರಪ್ಪನವರ ಬದಲು, ತೀಕ್ಷ್ಣ ಹಿಂದುತ್ವ ಪ್ರತಿಪಾದಿಸುವ ಮತ್ತು ನಿಷ್ಠುರವಾಗಿ ಮಾತನಾಡುತ್ತಾ ಯುವಕರನ್ನು ತಮ್ಮತ್ತ ಸೆಳೆಯುವ, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಟಿಪ್ಪು ಜಯಂತಿ ಸಂದರ್ಭದಲ್ಲಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅನಂತ್ ಕುಮಾರ್ ಹೆಗಡೆಗೆ, ಪರೋಕ್ಷವಾಗಿ ಬಿಜೆಪಿ ಹಿರಿಯ ಮುಖಂಡರ ಬೆಂಬಲವೂ ಇದೆ. ಹೀಗಾಗಿ, ಅನಂತ್ ಕುಮಾರ್ ಹೆಗಡೆಯವರು ಧಾರ್ಮಿಕವಾಗಿ ಜನರಲ್ಲಿ ಆತಂಕ ಹುಟ್ಟುವಂತೆ ಮಾತನಾಡುತ್ತಾ, ಬಿಜೆಪಿಯೇ ಹಿಂದೂಗಳ ರಕ್ಷಕ ಎಂಬಂತೆ ತೋರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಒಟ್ಟಿನಲ್ಲಿ, ಮುಂದಿನ ವಿಧಾನಸಭಾ ಚುನಾವಣೆ ಗೆಲ್ಲುವ ತವಕದಲ್ಲಿರುವ ಬಿಜೆಪಿಗೆ, ಯಡಿಯೂರಪ್ಪನವರಿಗಿಂತ ಅನಂತ್ ಕುಮಾರ್ ಹೆಗಡೆ ಅವರೇ ಸೂಕ್ತ ಅಭ್ಯರ್ಥಿ ಎಂದು ಕಂಡುಬರುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


now BSY.Then ananthkumar or else..
  • bharath.h.m
  • coffee planter
ಅದಕ್ಕಾಗಿಯೇ ಯಡಿಯೂರಪ್ಪ ನವರ ಪರಿವರ್ತನಾ ಸಭೆಗಳಲ್ಲಿ ಅನಂತ ಕುಮಾರ್ ಹೆಗಡೆಯವರು ದೊಂಬಿ ಗಲಾಟೆ ಮಾಡಿಸುತ್ತಿದ್ದಾರಂತೆ.
  • ಇಬ್ರಾಹಿಂ
  • ವೈದ್ಯಕೀಯ
Hage enadru madidre bsy abimanigalu bjp dulipat hagodu pakka.
  • Vijay
  • Busiess