‘ದೇವಸ್ಥಾನದ ತಂಟೆಗೆ ಹೋದರೆ ಹುಷಾರ್’12-12-2017

ಬಳ್ಳಾರಿ: ಐತಿಹಾಸಿಕ ದೇವಸ್ಥಾನದ ತಂಟೆಗೆ ಹೋದರೆ ಹುಷಾರ್ ಎಂದು, ರಾಜ್ಯ ಸರ್ಕಾರಕ್ಕೆ ರಂಭಾಪುರಿ ಜಗದ್ಗುರು ಶಿವಾಚಾರ್ಯ ಸ್ವಾಮಿಜಿ ಎಚ್ಚರಿಕೆ ನೀಡಿದ್ದಾರೆ. ಗಣಿಧಣಿ ಜನಾರ್ಧನ್ ರೆಡ್ಡಿ ಸುಂಕಲಮ್ಮ ದೇವಸ್ಥಾನ ಉರುಳಿಸಿದ ಶಾಪ ಹೇಗಿದೆ ಗೊತ್ತಲ್ಲ, ಸಿದ್ದರಾಮಯ್ಯನವರೇ ಕುಮಾರಸ್ವಾಮಿ ದೇವಸ್ಥಾನ ತಂಟೆಗೆ ಹೋದ್ರೆ ಎಚ್ಚರ ಎಂದಿದ್ದಾರೆ. ನೀವು ದುಡ್ಡು ಮಾಡಲು ಬೇಕಾದರೆ ಬೇರೆ ದಾರಿ ನೋಡಿಕೊಳ್ಳಿ, ಸಂಡೂರು ಕುಮಾರಸ್ವಾಮಿ ದೇವಸ್ಥಾನ ಸುತ್ತಮುತ್ತಲು ಗಣಿಗಾರಿಕೆಗೆ ಅನುಮತಿ ನೀಡಿದರೆ ಶಾಪ ತಟ್ಟೋದು ಗ್ಯಾರಂಟಿ ಎಂದು ಹೇಳಿದ್ದಾರೆ. ಗಣಿಗಾರಿಕೆಗೆ ಅನುಮತಿ ನೀಡಲು ಸಿಎಂ ಸಿದ್ದರಾಮಯ್ಯ, ಗಣಿ ಇಲಾಖೆ ಸಚಿವ ವಿನಯ್ ಕುಲಕರ್ಣಿ ಪಾಲುದಾರರಾದ್ರೆ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Shivacharya Mahaswam Rambhapuri ಗಣಿ ಇಲಾಖೆ ಗಣಿಧಣಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ