‘ವೈಷಮ್ಯ ಹೆಚ್ಚಿಸಲು ಬಿಜೆಪಿ ಕುಮ್ಮಕ್ಕು’

Dinesh gundurao alleged bjp for riots

12-12-2017

ಬೆಂಗಳೂರು: ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆ ಆಗಿರುವ ವಿಚಾರ ತುಂಬಾ ಖುಷಿಯಾಗಿದೆ, ಇದರಿಂದ ಯುವ ಜನತೆ ಮತ್ತಷ್ಟು ಸಂಘಟಿತವಾಗಲಿದೆ ಎಂದು, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದು, ಕಾರ್ಯಕರ್ತರೊಂದಿಗೆ ಸಿಹಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.  

ಇನ್ನು ಈ ವೇಳೆ ಮಾತನಾಡಿದ ಅವರು, ಹತ್ಯೆ ಪ್ರಕರಣದ ಬಗ್ಗೆ ಪೊಲೀಸರು ಕ್ರಮ ಗೊಳ್ಳುತ್ತಾರೆ, ಮುಕ್ತವಾದ ತನಿಖೆ ಕೂಡ ನಡೆಯಲಿದೆ. ಆದರೆ ವೈಷಮ್ಯ ಹೆಚ್ಚಿಸಲು ಬಿಜೆಪಿ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಕರ್ನಾಟಕ ಶಾಂತಿ, ನೆಮ್ಮದಿಯಿಂದಿದ್ದು, ವಿವಿಧ ಉದ್ಯಮಿಗಳು ಬಂಡವಾಳ ಹೂಡಲು ಬರುತ್ತಿರುವ ಈ ಸಮಯದಲ್ಲಿ ರಾಜ್ಯಕ್ಕೆ ಕೆಟ್ಟ ಹೆಸರು ತರುವ ಸಂಚನ್ನು ಬಿಜೆಪಿ ನಡೆಸಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಟಿಯರ್ ಗ್ಯಾಸ್ ಹಾರಬೇಕು-ಗಲಭೆ ಆಗ್ಬೇಕು ಅಂದಿದ್ದಾರೆ ಅಮಿತ್ ಷಾ, ಜನರಿಗೆ ಸುಳ್ಳು ಹೇಳಿ ಅಂತಾ ಈಶ್ವರಪ್ಪ ಹೇಳುತ್ತಾರೆ, ಕೇಂದ್ರ ಸಚಿವರಾದ ಅನಂತಕುಮಾರ್ ಹೆಗಡೆ, ಸಂಸದ ಪ್ರತಾಪ್ ಸಿಂಹ, ನಳೀನಕುಮಾರ್ ಕಟೀಲು ಪ್ರಚೋದಾತ್ಮಕ ಹೇಳಿಕೆ ನೀಡ್ತಾರೆ, ಇದೆಲ್ಲವೂ ಕೋಮುಗಲಭೆ ಸೃಷ್ಟಿಗೆ ಕಾರಣ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ