ಮಂಗಳೂರಲ್ಲಿ ಜೆಡಿಎಸ್ ಸೌಹಾರ್ದ ನಡಿಗೆ

JDS big conference in Mangalore

12-12-2017

ಬೆಂಗಳೂರು: ಮೊನ್ನೆ ಭಾನುವಾರ ತುಮಕೂರಿನಲ್ಲಿ ಅಲ್ಪಸಂಖ್ಯಾತರ ಸಮಾವೇಶ ಮಾಡಿದ್ದೇವೆ, ರಾಜ್ಯದ ಇತಿಹಾಸದಲ್ಲೇ ಅಲ್ಪಸಂಖ್ಯಾತ ಬಂಧುಗಳ ಸಮಾವೇಶ ಅತ್ಯಂತ ಯಶಸ್ವಿಯಾಗಿದೆ, ನಾಳೆ ಎಸ್.ಸಿ/ ಎಸ್.ಟಿ ವಿಭಾಗದಿಂದ ಬೃಹತ್ ಸಮಾವೇಶ ಮಾಡುತ್ತಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೇಳಿದ್ದಾರೆ. ಈ ಸಮಾವೇಶಕ್ಕೆ ಒಂದು ಲಕ್ಷಕ್ಕೂ ಹೆಚ್ಚಿನ ಜನ ನಾಳೆಯ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಮುಂದಿನ ಚುನಾವಣೆಗೆ ಪಕ್ಷ ಬಲಪಡಿಸುವ ದೃಷ್ಟಿಯಿಂದ ರ‍್ಯಾಲಿಗೆ ಚಾಲನೆ ನೀಡಲಾಗಿದೆ, ರೈತರು, ಯುವಕರು, ಹಿಂದುಳಿದ ವರ್ಗದ, ಮಹಿಳೆಯರ ಸಮಾವೇಶ ಮಾಡುತ್ತಿದ್ದೇವೆ ಎಂದರು.

ಜನವರಿ 9 ರಂದು ಮಂಗಳೂರಿನಲ್ಲಿ ಜೆಡಿಎಸ್ ನಡಿಗೆ ಸೌಹಾರ್ದತೆ ಕಡೆಗೆ ಮಾಡುತ್ತೇವೆ, ಸಮಾಜದಲ್ಲಿ ಯಾವುದೇ ರೀತಿಯ ಅಶಾಂತಿಯ ಪರಿಸ್ಥಿತಿ ಆಗದಂತೆ ನೋಡಿಕೊಳ್ಳುವುದು ರಾಜಕೀಯ ಮುಖಂಡರ ಕರ್ತವ್ಯ, ಆದರೆ ಧಾರ್ಮಿಕವಾಗಿ ಸಮಾಜ ಒಡೆಯುವ ಕೆಲಸ ಆಗ್ತಿದೆ, ಸಣ್ಣ ಪುಟ್ಟ ಘಟನೆಗಳನ್ನೇ ದೊಡ್ಡದಾಗಿ ಬಿಂಬಿಸಲಾಗ್ತಿದೆ ಎಂದರು. ರಾಜ್ಯದ ಹಲವು ಪ್ರದೇಶಗಳಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷದ ಚಿತಾವಣೆಗೆ ಕರಾವಳಿ ಜನ ಬಲಿಯಾಗಬಾರದು, ಶಾಲಾ ಮಕ್ಕಳನ್ನೇ ಬಿಜೆಪಿ ಮೆರವಣಿಗೆಗೆ ಕರೆತರುತ್ತಿದೆ. ಕುಮಾಟಾದಲ್ಲಿ ಶಾಲಾ ಮಕ್ಕಳನ್ನು ಮೆರವಣಿಗೆಗೆ ಕರೆತಂದಿದ್ದಾರೆ ಎಂದು ಆರೋಪಿಸಿದರು.


ಸಂಬಂಧಿತ ಟ್ಯಾಗ್ಗಳು

H.D.Kumaraswamy JDS ಹಿಂದುಳಿದ ವರ್ಗ ಸಮಾವೇಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ