ಮತ್ತೆ ಉದ್ವಿಗ್ನಗೊಂಡ ಶಿರಸಿ

Again tense in uttara kannada sirsi

12-12-2017

ಉತ್ತರ ಕನ್ನಡ: ಉತ್ತರ ಕನ್ನಡದ ಶಿರಸಿ ಮತ್ತಷ್ಟು ಉದ್ವಿಗ್ನಗೊಂಡಿದೆ. ನಗರದ ಹಲವೆಡೆ ಕಲ್ಲುತೂರಾಟ ಹೆಚ್ಚಾಗಿದೆ. ನಗರದ ಪೈವ್ ರೋಡ್ ಸರ್ಕಲ್, ಬಸ್ ಸ್ಟ್ಯಾಂಡ್ ಸರ್ಕಲ್, ಯಲ್ಲಾಪುರ ನಾಕಾದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಹಲವು ಅಂಗಡಿ ಮುಂಗಟ್ಟುಗಳಿಗೆ ಕಲ್ಲು ತೂರಿ ಬೆಂಕಿ ಹಚ್ಚಿದ್ದಾರೆ, ಇದರಿಂದ ಲಕ್ಷಾಂತರ ವಸ್ತುಗಳು ಹಾನಿಗೊಳಗಾಗಿವೆ. ಅಲ್ಲದೇ ಇಸ್ಲಾಂ ಮನೆಗಳ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಉದ್ರಿಕ್ತರು ಅಟ್ಟಹಾಸ ಮರೆದಿದ್ದಾರೆ. ಪೊಲೀಸರನ್ನು ಹತ್ತಿರಕ್ಕೆ ಬಿಡದ ಉದ್ರಿಕ್ತರ ಗುಂಪು, ಏಳು ಪೊಲೀಸ್ ವಾಹನಿಗಳಿಗೆ ಹಾನಿಮಾಡಿದ್ದಾರೆ ಮತ್ತು ಒಂದು ವಾಹನ ಸಂಪೂರ್ಣ ಜಖಂ ಗೊಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಕೋಮುಗಲಭೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

Sirsi communial riots ಉದ್ವಿಗ್ನ ಕಲ್ಲುತೂರಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ