ಸಂವಾದದಲ್ಲಿ ಕೋಪಗೊಂಡ ತಿಮ್ಮಪ್ಪ

Kagodu Thimmappa garam in bagalkot

12-12-2017

ಬಾಗಲಕೋಟೆ: ಬಾಗಲಕೋಟೆಯ ಕೂಡಲಸಂಗಮದಲ್ಲಿ, ಕೃಷ್ಣ ಮೇಲ್ದಂಡೆ ಯೋಜನೆಗೆ ಮೂರನೆ ಹಂತದ ಭೂಸ್ವಾಧೀನ ವಿಚಾರವಾಗಿ, ಬೆಲೆ ನಿಗಧಿ ಬಗ್ಗೆ ರೈತರೊಂದಿಗೆ ನಡೆಯುತ್ತಿರುವ ಸಂವಾದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಗರಂ ಆಗಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ ತಲೆ ಬಿಸಿ ಮಾಡಿಕೊಂಡ ಸಚಿವರು, ಆಣೆ ಪ್ರಮಾಣ ಮರೆತಿದ್ದೀರಿ ಎಂದು ಕೇಳಿದ್ದಕ್ಕೆ ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ.

ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ, ಈ ವೇಳೆಯ ಆಣೆ ಪ್ರಮಾಣದ ಬಗ್ಗೆ ನನಗೆ ಗೊತ್ತಿಲ್ಲ, ಸಿಎಂ ಮತ್ತು ಕಾಂಗ್ರೆಸ್ ಮುಖಂಡರು ಅಧಿಕಾರಕ್ಕೆ ಬರುವ ಮುನ್ನ ಆಣೆ ಪ್ರಮಾಣ ಮಾಡಿದ್ದರು, ಅಧಿಕಾರಕ್ಕೆ ಬಂದ ಮೇಲೆ ಪ್ರತಿ ವರ್ಷ 10 ಸಾವಿರ ಕೋಟಿ ಕೊಡೋದಾಗಿ ಆಣೆ ಮಾಡಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡೋದಾಗಿ ಸಂಗಮನಾಥನ ಮೇಲೆ ಆಣೆ ಮಾಡಿದ್ದ ಸಿಎಂ ಮತ್ತು ಕಾಂಗ್ರೆಸ್ ಮುಖಂಡರು, ಈ ಕುರಿತು ಪ್ರಶ್ನೆಗೆ ಕೋಪಗೊಂಡಿದ್ದಾರೆ ಕಂದಾಯ ಸಚಿಕ ಕಾಗೋಡು ತಿಮ್ಮಪ್ಪ.

ಇನ್ನು ಸರಕಾರದಿಂದ ಮಠ, ಸಂಘಟನೆಗಳಿಗೆ ಭೂದಾನ ವಿಚಾರವಾಗಿ ಪ್ರತಿಕ್ರಿಯಿಸಿ, ಇದರಲ್ಲಿ ತಪ್ಪೇನು ಇಲ್ಲ, ಸಾಮಾಜಿಕ ಕಾರ್ಯದಲ್ಲಿ ತೊಡಗಿದವರಿಗೆ ಭೂಮಿ ಕೊಡುತ್ತಿದ್ದೇವೆ, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದರು. ನನಗೆ ಸಂತ್ರಸ್ತರ ಕಷ್ಟ ಗೋಳಾಟ ಗೊತ್ತಿದೆ, ಲಿಂಗನಮಕ್ಕಿ ಜಲಾಶಯ ಸಂತ್ರಸ್ತರ ನೆನೆದುಕೊಂಡರೆ ಕಣ್ಣಲ್ಲಿ ನೀರು ಬರುತ್ತವೆ ಎಂದು ಭಾವುಕರಾದರು.

ಕೃಷ್ಣ ಮೇಲ್ದಂಡೆ ಯೋಜನೆಗೆ ಭೂಸ್ವಾಧೀನ ವಿಚಾರವಾಗಿ  ರೈತರೊಂದಿಗೆ ನಡೆಯುತ್ತಿರುವ ಸಂವಾದದಲ್ಲಿ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಬಸವರಾಜ್ ರಾಯರೆಡ್ಡಿ, ಹೆಚ್.ಕೆ.ಪಾಟೀಲ್, ಬಾಗಲಕೋಟೆ ಶಾಸಕ ಹೆಚ್.ವೈ ಮೇಟಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್, ಸಂಸದ ಪಿಸಿ ಗದ್ದಿಗೌಡರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಭಾಗಿಯಾಗಿದ್ದು, ಸಂವಾದದ ನಂತರ ಒಂದು ವಾರದೊಳಗೆ ಸರಕಾರಕ್ಕೆ ವರದಿ ಸಲ್ಲಿಸೋದಾಗಿ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ