ಶಿರಸಿ ಬಂದ್: ಎಲ್ಲೆಡೆ ಪೊಲೀಸರ ಗಸ್ತು

12-12-2017 280
ಉತ್ತರ ಕನ್ನಡ: ಪರೇಶ ಮೇಸ್ತ ಸಾವು ಹಿನ್ನೆಲೆ, ಮಲೆನಾಡ ಹೆಬ್ಬಾಗಿಲು ಶಿರಸಿ ಬಂದ್ ಗೆ ಶ್ರೀರಾಮ ಸೇನೆ, ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಕರೆ ನೀಡಿದ್ದು, ಶರಸಿಯಲ್ಲಿ ಅಂಗಡಿ, ಮುಂಗಟ್ಟುಗಳ ಮುಚ್ಚಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಆಟೋ ಚಾಲಕರು ಎಂದಿನಂತೆ ರಸ್ತೆಗಿಳಿದಿದ್ದಾರೆ. ಇನ್ನು ಕೆ.ಎಸ್.ಆರ್.ಟಿ.ಸಿ ಬಸ್ ಗಳೂ ಸಹ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಬಂದ್ ಹಿನ್ನೆಲೆ ಪೊಲೀಸರು ಎಲ್ಲೆಡೆ ಗಸ್ತು ತಿರುಗುತ್ತಿದ್ದಾರೆ. ಅಲ್ಲದೇ ಭದ್ರತೆಗಾಗಿ ನಗರದಲ್ಲಿ 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲೆಯಾದ್ಯಂತ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಯಲ್ಲಿದೆ. ಸಾರ್ವಜನಿಕ ಸಭೆ, ಸಮಾರಂಭ, ಬೈಕ್ ರ್ಯಾಲಿಗಳಿಗೆ ನಿಷೇಧ ಹೇರಿದೆ. ಇನ್ನು ಜಿಲ್ಲೆಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆಗಳಿದ್ದು, ನಗರದ ವಿಕಾಸಾಶ್ರಮ ಮೈದಾನದಿಂದ ಪ್ರತಿಭಟನಾ ರ್ಯಾಲಿ ಹೊರಡಲಿದೆ ಎನ್ನಲಾಗಿದೆ, ಈ ಕುರಿತು ಪೊಲೀಸರು, ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ನಿನ್ನೆ ಉದ್ವಿಗ್ನ ಸ್ವರೂಪ ಪಡೆದುಕೊಂಡಿದ್ದ ಕಮಟಾ ಕೂಡ ಸಹಜ ಸ್ಥತಿಯತ್ತ ಮರಳಿದ್ದರೂ ಸಹ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.
ಇನ್ನು ಇದೇ ವೇಳೆ ಶಿರಸಿ ಬಸ್ ನಿಲ್ದಾಣಕ್ಕೆ ನುಗ್ಗಿದ ಹಿಂದು ಕಾರ್ಯಕರ್ತರು, ಅಂಗಡಿ ಮುಚ್ಚುವಂತೆ ಒತ್ತಾಯ ಮಾಡಿದ್ದಾರೆ. ಇದನ್ನು ಮಾಧ್ಯಮದವರು ವೀಡಿಯೋ ಮಾಡುತ್ತಿದ್ದ ವೇಳೆ ಅದನ್ನು ತಡೆದಿದ್ದಾರೆ. ಈ ಸಂದರ್ಭ ಖಾಸಗಿ ವರದಿಗಾರನ ಕ್ಯಾಮರಾಕ್ಕೆ ಕೈಹಾಕಿ ಅವಾಜ್ ಹಾಕಿದ್ದಾರೆ.
ಒಂದು ಕಮೆಂಟನ್ನು ಹಾಕಿ