3 ಗರ್ಭಗಳಲ್ಲಿ 1…!12-12-2017

ಪ್ರತಿ ವರ್ಷ ಭಾರತದಲ್ಲಿ ಆಗುವ ಮೂರು ಗರ್ಭಧಾರಣೆಗಳಲ್ಲಿ ಒಂದು ಅಬಾರ್ಷನ್ ನಲ್ಲಿ ಅಂತ್ಯವಾಗುತ್ತದೆ ಅಂದರೆ ಗರ್ಭಪಾತವಾಗುತ್ತದೆ. ಇದರ ಜೊತೆಗೆ, ಭಾರತದಲ್ಲಿನ ಗರ್ಭಧಾರಣೆ಼ಗಳಲ್ಲಿ ಹೆಚ್ಚೂಕಮ್ಮಿ ಅರ್ಧದಷ್ಟು ಅಂದರೆ ಶೇ.48ರಷ್ಟು ಗರ್ಭಧಾರಣೆಗಳು ಅಸಂಕಲ್ಪಿತ ಅಂದರೆ ಗರ್ಭದರಿಸುವ ಉದ್ದೇಶವೇ ಇಲ್ಲದಾಗಿದ್ದಾಗಿನ ಸನ್ನಿವೇಶದಲ್ಲಿ ಆದ ಗರ್ಭಧಾರಣೆಗಳು.

ಇದೇ ವಿಚಾರದಲ್ಲಿ ಮತ್ತೂ ಮುಂದುವರಿದಂತೆ, ದೇಶದಲ್ಲಿ ನಡೆಯುವ ಗರ್ಭಪಾತ ಪ್ರಕರಣಗಳಲ್ಲಿ 8 ಲಕ್ಷ ಮಹಿಳೆಯರು ಆರೋಗ್ಯ ಮತ್ತು ಪ್ರಾಣಕ್ಕೆ ಕುತ್ತುತರುವಂತೆ ಅಸುರಕ್ಷಿತ ರೀತಿಯಲ್ಲಿ ಗರ್ಭಪಾತ ಮಾಡಿಸಿಕೊಳ್ಳುತ್ತಾರೆ.  2015ರಲ್ಲಿ ಭಾರತದಲ್ಲಿ 1.56 ಕೋಟಿ ಗರ್ಭಪಾತಗಳು ದಾಖಲಾಗಿವೆ ಎಂದು ಹೆಸರಾಂತ ಮೆಡಿಕಲ್ ಜರ್ನಲ್ ದಿ ಲ್ಯಾನ್ಸೆಟ್ ಪ್ರಕಟಿಸಿರುವ ವರದಿ ತಿಳಿಸುತ್ತದೆ. ಅನಪೇಕ್ಷಿತ ಗರ್ಭಧಾರಣೆಯನ್ನು ತಡೆಯಲು, ಭಾರತದಲ್ಲಿ ಇನ್ನೂ ಹೆಚ್ಚಿನ ಮಟ್ಟಿಗೆ ಗರ್ಭಧಾರಣೆ ನಿಯಂತ್ರಣ ಕ್ರಮಗಳನ್ನು ಜನಪ್ರಿಯಗೊಳಿಸಬೇಕಿದೆ ಎಂದು ಲ್ಯಾನ್ಸೆಟ್ ವರದಿ ಅಭಿಪ್ರಾಯಪಟ್ಟಿದೆ.


ಸಂಬಂಧಿತ ಟ್ಯಾಗ್ಗಳು

Abortion pregnancies ಲ್ಯಾನ್ಸೆಟ್ ಗರ್ಭಪಾತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ