‘ಬಿಜೆಪಿಯವರು ಬದಲಾಗಬೇಕು’12-12-2017

ಬಾಗಲಕೋಟೆ: ಪರಿವತ೯ನಾ ಯಾತ್ರೆ ಮಾಡುವ ಮೊದಲು ಬಿಜೆಪಿಗರು ತಮ್ಮ ನಡವಳಿಕೆ ತಿದ್ದಿಕೊಳ್ಳಲಿ, ಬಿಜೆಪಿಯವರ ಆಚಾರ, ವಿಚಾರ ಸಿದ್ಧಾಂತಗಳಲ್ಲಿ ಪರಿವತ೯ನೆ ಆಗಲಿ ಎಂದು, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಹೇಳಿದ್ದಾರೆ. ಬಾಗಲಕೋಟೆಯಲ್ಲಿಂದು ಮಾತನಾಡಿದ ಅವರು, ಹಿಂದೆ 5 ವಷ೯ದ ಆಧಿಕಾರದ ಅವಧಿ ಇದ್ದಾಗ, ಬಿಜೆಪಿಯವರು ಹೇಗೆ ನಡೆದುಕೊಂಡಿದ್ದಾರೆಂದು ರಾಜ್ಯದ ಜನತೆ ನೋಡಿದ್ದಾರೆ, ಹೀಗಾಗಿ ಮೊದಲು‌ ಬಿಜೆಪಿ ಮುಖಂಡರ ಪರಿವತ೯ನೆ ಆಗಲಿ, ನೆಗಟಿವ್ ಮತ್ತು ಟೀಕೆಗಳನ್ನು ಹೇಳುವುದರಲ್ಲಿ ನನಗೆ ವಿಶ್ವಾಸ ಇಲ್ಲ, ಆದರೆ ಬಿಜೆಪಿಯವರು ಬದಲಾಗಬೇಕು ಎಂದು ಹೇಳಿದ್ದಾರೆ.

ಇನ್ನು ರಾಜ್ಯದಲ್ಲಿ ತಜ್ಞ ವೈದ್ಯರ ಕೊರತೆ ಇರೋದು ನಿಜ, ಈ ಉದ್ದೇಶದಿಂದಲೇ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಮುಂದಾಗಿದ್ದೇವೆ,ಬಜೆಟ್ ನಲ್ಲಿ ಘೋಷಣೆಯಾಗಿರೋ ಹೊಸ ಕಾಲೇಜುಗಳ ಸ್ಥಾಪನೆಗೆ ಅನುಮತಿ ಸಿಗಬೇಕಿದೆ ಎಂದ ಅವರು, ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಸ್ಥಾಪಿಸುವ ಉದ್ದೇಶವಿದೆ ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ