ದೇವಸ್ಥಾನದ 3 ಹುಂಡಿ ಒಡೆದು ದರೋಡೆ

Temple robbery in Bangalore

11-12-2017

ಬೆಂಗಳೂರು: ನಂದಿನಿ ಲೇಔಟ್‍ನ ಬಿಡಿಎ ಪಾರ್ಕ್ ಬಳಿ ಇರುವ ಗಣೇಶ ದೇವಾಲಯಕ್ಕೆ ನಿನ್ನೆ ಮಧ್ಯ ರಾತ್ರಿ ಕಿಟಕಿ ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ಮೂರು ಹುಂಡಿಗಳನ್ನು ಒಡೆದು 60 ಸಾವಿಕ್ಕೂ ಹೆಚ್ಚು ಹಣ ದೋಚಿ ಪರಾರಿಯಾಗಿದ್ದಾರೆ.

ಗಣೇಶ ದೇವಸ್ಥಾನದ ಕಿಟಕಿ ಮುರಿದು ಮಧ್ಯ ರಾತ್ರಿ ನುಗ್ಗಿರುವ ದುಷ್ಕರ್ಮಿಗಳು ದೇವಾಲಯದಲ್ಲಿದ್ದ ಮೂರು ಹುಂಡಿಗಳನ್ನು ಹೊರಗೆ ತಂದು ಒಡೆದು ಅದರಲ್ಲಿದ್ದ ಸುಮಾರು 60 ಸಾವಿರ ರೂ. ಹಣ ದೋಚಿ ಪರಾರಿಯಾಗಿದ್ದು, ಮುಂಜಾನೆ ಅರ್ಚಕರು ದೇವಾಲಯಕ್ಕೆ ಬಂದು ನೋಡಿದಾಗ ಕಳ್ಳತನವಾಗಿರುವುದು ಪತ್ತೆಯಾಗಿದೆ. ಕಳ್ಳತನದ ಸಂಬಂಧ ದೇವಾಲಯದ ಕಾರ್ಯದರ್ಶಿ ಜಗನ್ನಾಥ್ ರಾವ್ ಅವರು ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ನಂದಿನಿ ಲೇಔಟ್ ಪೊಲೀಸರು, ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ