‘ಗುಜರಾತ್ ನಲ್ಲಿ ಕಾಂಗ್ರೆಸ್ ಗೆಲ್ಲೋದಿಲ್ಲ’11-12-2017

ಹುಬ್ಬಳ್ಳಿ: ವಿರೋಧಿ ರಾಷ್ಟ್ರದ ಜೊತೆಗೆ ಸೇರಿಯಾದರೂ ಬಿಜೆಪಿ ಮುಗಿಸಲು ಕಾಂಗ್ರೆಸ್ ವಾಮಮಾರ್ಗ ಹುಡುಕುತ್ತಿದೆ ಎಂದು, ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಗಂಭೀರ ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಪಾಕಿಸ್ತಾನದ ಜೊತೆ ಸೇರಿ ಬಿಜೆಪಿಯನ್ನು, ಮೋದಿಯವರನ್ನು ರಾಜಕೀಯವಾಗಿ ಮುಗಿಸಲು ತಂತ್ರ ರೂಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕ ಮಣಿಶಂಕರ್ ಅಯ್ಯರ್ ಜೊತೆಗೆ ಪಾಕ್ ನ ಮಾಜಿ ಸಚಿವರ ಮಾತುಕತೆ ನಡೆದಿದೆ, ಮನಮೋಹನ್ ಸಿಂಗ್ ಸಹ ಈ ಮಾತುಕತೆಯಲ್ಲಿ ಭಾಗಿಯಾಗಿದ್ದರು, ಇದನ್ನು ಕಾಂಗ್ರೆಸ್ ಪಕ್ಷದ ನಾಯಕರು ಸುಳ್ಳೆಂದು‌ ಬೇಕಿದ್ದರೇ ಸಾಬೀತುಪಡಿಸಲಿ ಎಂದು ಸವಾಲೆಸೆದಿದ್ದಾರೆ.

ಏನೇ ಮಾಡಿದರೂ ಕಾಂಗ್ರೆಸ್ ಗುಜರಾತ್ ನಲ್ಲಿ ಗೆಲ್ಲೋದಿಲ್ಲ, ನಾವೇ ಗೆಲ್ಲುತ್ತೇವೆ, ಗುಜರಾತ್ ನಲ್ಲಿ ಬಿಜೆಪಿ ಗೆದ್ದರೆ ಅದರ ಪರಿಣಾಮ ಕರ್ನಾಟಕದ ಮೇಲೂ ಆಗಲಿದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Muchas gracias. ?Como puedo iniciar sesion?
  • poeilpfpzk
  • rzwuklptlz