ರಸ್ತೆಗುಂಡಿ ಸಮಸ್ಯೆಗೆ ‘ಫಿಕ್ಸ್ ಮೈ ಸ್ಟ್ರೀಟ್’ ಆ್ಯಪ್

BBMP launched new

11-12-2017

ಬೆಂಗಳೂರು: ರಸ್ತೆಗುಂಡಿ ಸಮಸ್ಯೆಗೆ ಬಿಬಿಎಂಪಿ ಹೊಸದೊಂದು ಪ್ಲಾನ್ ಮಾಡಿದ್ದು, ರಸ್ತೆ ಗುಂಡಿ ಪರಿಹಾರಕ್ಕೆ ವಿಶೇಷ ಆ್ಯಪ್ ಬಿಡುಗಡೆಗೊಳಿಸಿದೆ. 'ಫಿಕ್ಸ್ ಮೈ ಸ್ಟ್ರೀಟ್' ಆ್ಯಪ್ ಅನ್ನು ಮೇಯರ್ ಸಂಪತ್ ರಾಜ್ ಬಿಡುಗಡೆ ಮಾಡಿದರು. ನಗರದ ರಸ್ತೆಯ ಯಾವುದೇ ಸಮಸ್ಯೆ ಬಗ್ಗೆ ವರದಿ ಮಾಡಲು ವಿಶೇಷ ಆ್ಯಪ್ ಇದಾಗಿದ್ದು, ರಸ್ತೆಗುಂಡಿ, ಕಸ, ಬೀದಿ ದೀಪ ಕೊರತೆ ಬಗ್ಗೆ ದೂರು ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ಸಮಸ್ಯೆಯ ಒಂದು ಫೋಟೋದೊಂದಿಗೆ ದೂರು ಸಲ್ಲಿಕೆಗೆ ಅವಕಾಶವಿದೆ. ದೂರು ದಾಖಲಾದ ತಕ್ಷಣ ಸಂಬಂಧಪಟ್ಟ ಅಧಿಕಾರಿಗೆ ಫೋಟೋ, ನಕ್ಷೆ ಜೊತೆಗೆ ದೂರು ಸಲ್ಲಿಕೆಯಾಗಲಿದೆ.

ಆ್ಯಪ್ ನಲ್ಲಿ ರಸ್ತೆಗುಂಡಿ, ಕಸ, ಬೀದಿ ದೀಪ ಸಮಸ್ಯೆ ವರದಿ ಆದ ಕೂಡಲೇ, ಸಂಬಂಧಪಟ್ಟ ಅಧಿಕಾರಿಗೆ ಮೆಸೇಜ್ ಬರಲಿದೆ, ಅಧಿಕಾರಿ ಸಮಸ್ಯೆ ಪರಿಹಾರಕ್ಕೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಬೇಕು, ಮೊಬೈಲ್ ನಲ್ಲಿ ಸಮಸ್ಯೆ ಕುರಿತು ಪರಿಶೀಲಿಸುವ , ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವ ಅವಕಾಶ ನೀಡಲಾಗಿದೆ ಎಂದು, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ಆ್ಯಪ್ ನಲ್ಲಿ ವರದಿಯಾಗುವ ಸಮಸ್ಯೆ ಪರಿಹರಿಸಲು ಡೆಡ್ ಲೈನ್ ನೀಡಲಾಗಿದೆ. ರಸ್ತೆಗುಂಡಿ ಸಮಸ್ಯೆ ಪರಿಹರಿಸಲು ಒಂದು ವಾರ, ಕಸ ಸಮಸ್ಯೆ ಪರಿಹಾರಕ್ಕೆ ಇಪ್ಪತ್ನಾಲ್ಕು ಗಂಟೆ ಗಡುವು ನೀಡಲಾಗಿದೆ, ತಡವಾದ್ರೆ ಸಾರ್ವಜನಿಕರಿಗೆ ಕಾರಣ ತಿಳಿಸಬೇಕು ಎಂದು ತಿಳಿಸಿದರು.

ಇನ್ನು ಈ ಕುರಿತು ಸಹಾಯಕ ಎಂಜಿನಿಯರ್ ಹಾಗೂ, ಹೆಲ್ತ್ ಇನ್ಸ್ಪೆಕ್ಟರ್ ನೋಡಿಕೊಳ್ಳಬೇಕು ಅವರ ಹೈಯರ್ ಅಥಾರಿಟಿ ಪ್ರತೀ ಸಮಸ್ಯೆಗಳನ್ನು ಮಾನಿಟರ್ ಮಾಡುತ್ತಾರೆ, ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಸಮಸ್ಯೆಯನ್ನು ಆಯುಕ್ತರು ರಿವ್ಯು ಮಾಡುತ್ತಾರೆ, ಬೇಜವಾಬ್ದಾರಿ ತೋರಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ತೀರ್ಮಾನಿಸಿರುವುದಾಗಿ ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ