ಸುನೀಲ್ ಹೆಗ್ಗರವಳ್ಳಿ ನಿವಾಸಕ್ಕೆ ಪೊಲೀಸ್ ಭದ್ರತೆ

Police protection to Sunil heggaravalli

11-12-2017

ಬೆಂಗಳೂರು: ರವಿ ಬೆಳಗೆರೆಯಿಂದ ಕೊಲೆ ಬೆದರಿಕೆ ಇರುವ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಸುನಿಲ್ ನಿವಾಸಕ್ಕೆ ನಿಯೋಜಿಸಿ ಭದ್ರತೆ ಒದಗಿಸಲಾಗಿದೆ.

ರವಿ ಬೆಳಗೆರೆ ತಮ್ಮ ಕೊಲೆಗೆ ಸುಪಾರಿ ನೀಡಿ, ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದಲ್ಲಿ ಭೇಟಿಯಾದ ಸುನಿಲ್ ಹೆಗ್ಗರವಳ್ಳಿ, ತಮಗೆ ಸರ್ಕಾರದ ವೆಚ್ಚದಲ್ಲಿ ಭದ್ರತೆ ನೀಡುವಂತೆ  ಮನವಿ ಮಾಡಿಕೊಂಡರು. ವಯಸ್ಸಾದ ತಂದೆ, ತಾಯಿ ಮನೆಯಲ್ಲಿದ್ದಾರೆ. ಅವರನ್ನು ನೋಡಿಕೊಳ್ಳುವ ಜೊತೆಗೆ ಭದ್ರತೆಗೆ ಖರ್ಚಾಗುವ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರ್ಕಾರವೇ ಸಂಪೂರ್ಣ ವೆಚ್ವವನ್ನು ಭರಿಸುವಂತೆ ಅವರು ಮನವಿ ಮಾಡಿದರು.


ಸಂಬಂಧಿತ ಟ್ಯಾಗ್ಗಳು

Sunil Heggaravalli Ravi Belagere ಸುಪಾರಿ ಭದ್ರತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ