ಸಿದ್ದರಾಮಯ್ಯ ವಿರುದ್ಧ ಡಿವಿಎಸ್ ಕಿಡಿ

Sadananda gowda challenged siddaramaiah

11-12-2017

ಕೊಡಗು: ವರುಣಾ ಕ್ಷೇತ್ರದಲ್ಲಿನ ರೈತರ ಬೆಳೆಗೆ ನೀರು ಕೊಡಲಾಗದ ಸಿದ್ದರಾಮಯ್ಯ, ಮುಖ್ಯಮಂತ್ರಿ ಹೋಗ್ಲಿ, ಶಾಸಕ ಸ್ಥಾನಕ್ಕೂ ಯೋಗ್ಯ ಅಲ್ಲ, ವರುಣ ಕ್ಷೇತ್ರದಲ್ಲಿ ನಾನು ನಿಲ್ಲುವುದಿಲ್ಲ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ, ಗೆಲ್ಲಿಸಿ ತೊರಿಸುತ್ತೇವೆ, ಎಂದು ಕೇಂದ್ರ ಸಚಿವ ಸದಾನಂದ ಗೌಡ ಸವಾಲು ಹಾಕಿದ್ದಾರೆ. ಕೊಡಗಿನಲ್ಲಿಂದು ಮಾತನಾಡಿದ ಅವರು, ಕ್ಷೇತ್ರದ ಉಸ್ತುವಾರಿಯನ್ನು ನಾನು ನೋಡಿಕೊಳ್ಳುತ್ತೇನೆ, ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸಿಯೇ ಸಿದ್ಧ ಎಂದು ಗುಡುಗಿದ್ದಾರೆ. ಸಿದ್ದರಾಮಯ್ಯ ಈಗಾಗಲೆ ಸೋಲೊಪ್ಪಿಕೊಂಡಿದ್ದಾರೆ, ಹೀಗಾಗಿ ವರುಣಾ ಕ್ಷೇತ್ರದಲ್ಲಿ ಪುತ್ರನನ್ನು ನಿಲ್ಲಿಸುತ್ತೇನೆಂದು ಹೇಳಿದ್ದಾರೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ