ಹೊತ್ತಿ ಉರಿಯುತ್ತಾ ಕರ್ನಾಟಕ..?

Karnataka politics

11-12-2017 530

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿಯವರು ಏನೆಲ್ಲ ಮಾಡಿದರೂ, ಅಧಿಕಾರದಲ್ಲಿರುವ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾವುದೇ ಗಂಭೀರ ಭ್ರಷ್ಟಾಚಾರದ ಆರೋಪ ಮಾಡಲು, ಬಿಜೆಪಿಯವರಿಗೆ ಏನೂ ಸಿಗುತ್ತಿಲ್ಲ. ಸಿದ್ದರಾಮಯ್ಯ ಆಡಳಿತದ ವಿರುದ್ಧವೂ ಬೊಟ್ಟು ಮಾಡಿ ತೋರಿಸುವಂಥದ್ದೇನೂ ಕಾಣುತ್ತಿಲ್ಲ. ಹೀಗಾಗಿ, ಜನಮನ ಗೆಲ್ಲುವಲ್ಲಿ ವಿಫಲರಾಗುತ್ತಿರುವ ಬಿಜೆಪಿಯವರು, ಮುಂದಿನ ಚುನಾವಣೆಗೆ ಮುನ್ನ, ರಾಜ್ಯದಲ್ಲಿ ಒಂದಿಷ್ಟು ಕೋಮುಭಾವನೆ ಕೆರಳಿಸುವ ಘಟನೆಗಳು ನಡೆಯುವಂತೆ ಮಾಡಬಹುದು. ಹಿಂದೂಗಳ ಹಿತ ಕಾಯುವುದು ನಮ್ಮಿಂದ ಮಾತ್ರ ಸಾಧ್ಯ ಎಂದು ಹೇಳಿಕೊಂಡು, ರಾಜ್ಯದಲ್ಲಿ ಧಾರ್ಮಿಕ ಧೃವೀಕರಣಕ್ಕೆ ಮುಂದಾಗಬಹುದು ಎಂಬ ಮಾಹಿತಿ ರಾಜ್ಯ ಸರ್ಕಾರಕ್ಕೆ ದೊರೆತಿದೆಯಂತೆ.

ಈ ಬಗ್ಗೆ ಗುಪ್ತದಳದವರು ಮಾಹಿತಿ ನೀಡಿದ್ದು, ಬಿಜೆಪಿಯವರು ನಡೆಸಿರುವ ಹುನ್ನಾರವನ್ನು, ರಾಜ್ಯಸರ್ಕಾರ ಸೂಕ್ತ ಸಮಯದಲ್ಲಿ ಬಹಿರಂಗ ಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.ಸಂಬಂಧಿತ ಟ್ಯಾಗ್ಗಳು

Ellection-2018 Karnataka ಹುನ್ನಾರ ಧಾರ್ಮಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ