'ಸಂದರ್ಶನ ಮಾಡಿ ಅಭ್ಯರ್ಥಿಗಳ ಆಯ್ಕೆ’11-12-2017

ಬೆಳಗಾವಿ: ಜನ ಈಗಿರುವ ರಾಜಕೀಯ ವ್ಯವಸ್ಥೆಗೆ ಬೇಸತ್ತು ಹೋಗಿದ್ದಾರೆ, ಸದ್ಯ ವಿಷಯಾಧಾರಿತ ರಾಜಕೀಯ ನಡೆಯುತ್ತಿದೆ ಎಂದು, ಕೆಪಿಜೆಪಿ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ. ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಹೊಸ ರಾಜಕಾರಣಕ್ಕೆ ವೇದಿಕೆ ರೂಪಿಸಿದ್ದೇನೆ, ಸಾಕಷ್ಟು ಜನರು ನನ್ನೊಂದಿಗೆ ಕೈಜೋಡಿಸುತ್ತಿದ್ದಾರೆ, ಕೇವಲ 20ರಷ್ಟು ಜನರ ಕೈಯಲ್ಲಿ ಅಧಿಕಾರವಿದೆ, ಆದರೆ ಶೇ.80ರಷ್ಟು ಜನರು ಸುಮ್ಮನಿದ್ದಾರೆ, ಹೊಣೆಗಾರಿಕೆ ನಮಗೆ ಬೇಕಾಗಿದೆ, ಈ ಹಿಂದೆ ರಾಜರ ಆಡಳಿತ ಕಾಲವಿತ್ತು, ಈಗ ರಾಜಕಾರಣವಾಗಿದೆ ಎಂದರು.

ನಾನು ನಮ್ಮಣ್ಣ ಸೇರಿ ಜಮೀನು ತೆಗೆದುಕೊಂಡಿದ್ದೇವೆ, ಕೃಷಿಗೆಂದು ತೆಗೆದುಕೊಂಡ ಸ್ಥಳದಲ್ಲಿ ಕೃಷಿ ಮಾಡುತ್ತಿದ್ದೇವೆ, ರೆಸಾರ್ಟ್ ಹಿಂದಗಡೆ ಈ ಕೃಷಿ ಭೂಮಿಯಿದೆ, ಕೆ.ಎಸ್.ಡಿ.ಯಿಂದ ನಾನು ರೆಸಾರ್ಟ್ ಪಡೆದಿದ್ದೇನೆ, ಕೋರ್ಟ್ ಸಹ ನಿರ್ಧಾರ ತೆಗೆದುಕೊಂಡಿದೆ. ಹಿರೇಮಠ ಅವರು ಕೋರ್ಟ್ ನಿರ್ಧಾರವನ್ನು ಪ್ರಶ್ನೆ ಮಾಡ್ತಾರೆ, ವಿಚಾರ ಇರೋರು ರಾಜಕಾರಣಕ್ಕೆ ಬರದಂತೆ ಹೆದರಿಸುತ್ತಾರೆ, ನಮ್ಮ ಮೈಂಡ್ ಸೆಟ್ ಹೇಗಾಗಿದೆ ಅಂದ್ರೆ ಹಣವಿದ್ರೆ ಮಾತ್ರಾ ರಾಜಕಾರಣ ಅಂತಾ ಆಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯ ಮಟ್ಟದ ಪ್ಲಾನಿಂಗ್ ನಮ್ಮ ಪ್ರಣಾಳಿಕೆಯಲ್ಲಿದೆ, ಜನವರಿ ಅಂತ್ಯದವರೆಗೂ ಕೆಪಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಉದ್ದೇಶವಿಲ್ಲ, ಅರ್ಹತೆ ಇರುವ ಅಭ್ಯರ್ಥಿಗಳನ್ನು ಸಂದರ್ಶನ ಮಾಡಿ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

KPJP upendra ರಾಜಕಾರಣ ಸಂಸ್ಥಾಪಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ