ರೈತ ಆತ್ಮಹತ್ಯೆ ಹಿನ್ನೆಲೆ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಆಕ್ರೋಶ

Kannada News

12-04-2017

ವಿಜಯಪುರ : ನನ್ನ ಸಾವಿಗೆ ಕಾರಣವೇ  ರಾಜ್ಯ ಸರ್ಕಾರ ಎಂದು ಡೆತ್ ನೋಟ್ ಬರೆದು ವಿಷ ಸೇವಿಸಿ ರೈತ ಆತ್ಮಹತ್ಯೆ ಪ್ರಕರಣ. ಮೃತ ರೈತ ಸಂತೋಷ ಕುಲಕರ್ಣಿ ಮನೆಗೆ ದೇವರಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಭೇಟಿ ನೀಡಿ ಸಂತೋಷ ಕುಲಕರ್ಣಿ ಕುಟುಂಬದವರಿಗೆ ಸಾಂತ್ವನ ಹೇಳಿದರು.ಕುಟುಂಬಸ್ಥರಿಗೆ ವೈಯುಕ್ತಿವಾಗಿ 25,000 ರೂಪಾಯಿ ಸಹಾಯ ಧನ ನೀಡಿದ ಶಾಸಕ.  ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮನವಿ. ರೈತರು ಕೈಯ್ಯಲ್ಲಿ ಎರಡು ಖಡ್ಗ ಹಿಡಿಯಬೇಕಾಗಿದೆ‌. ಒಂದು ಖಡ್ಗದಿಂದ ಸಾಲ ಮಾಡಲು ಕಾರಣವಾದವರನ್ನು ಕೊಚ್ಚಿ ಹಾಕಬೇಕು.  ಎರಡನೆಯದು ಮತದಾನವೆಂಬ ಖಡ್ಗವನ್ನು ಚುನಾವಣೆಯಲ್ಲಿ ಉಪಯೋಗಿಸಿ ಎಂದು ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಹೇಳಿಕೆ ನೀಡಿದರು. ಅಷ್ಟೇ ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಾಚಿಕೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ