ರೈಲು ಸೇಫ್ ಅಲ್ವೇ..?

Train travel riskier as crime jumps by 34 per cent

11-12-2017 490

ಒಂದು ಕಾಲದಲ್ಲಿ ರೈಲು ಪ್ರಯಾಣ ಸುಖದಾಯಕ ಮತ್ತು ಸುರಕ್ಷಿತ ಎಂಬ ಮಾತು ಪ್ರಚಲಿತದಲ್ಲಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪದೇ ಪದೇ ನಡೆಯುತ್ತಿರುವ ರೈಲು ಅಪಘಾತಗಳು ಮತ್ತು ಸಾವುನೋವನ್ನು ಗಮನಿಸಿದಾಗ ಆ ಮಾತು ಸುಳ್ಳು ಎಂಬುದು ಗೊತ್ತಾಗುತ್ತದೆ. ಇದರ ಜೊತೆಗೆ, ಕಳೆದ ಕೆಲವು ವರ್ಷಗಳಿಂದ ರೈಲುಗಳಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ರೈಲು ಪ್ರಯಾಣವನ್ನು ಮತ್ತಷ್ಟು ಅಪಾಯಕಾರಿಯಾಗಿಸಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ ಮಾಹಿತಿ ಪ್ರಕಾರ, ಕಳೆದ 2 ವರ್ಷಗಳಲ್ಲಿ ಭಾರತೀಯ ದಂಡ ಸಂಹಿತೆ(ಐಪಿಸಿ) ಅಡಿಯಲ್ಲಿ ದಾಖಲಾಗಿರುವ ರೈಲು ಅಪರಾಧಗಳ ಸಂಖ್ಯೆ ಶೇಕಡ 34 ರಷ್ಟು ಹೆಚ್ಚಾಗಿದೆ. 2016ರಲ್ಲಿ ರೈಲುಗಳಲ್ಲಿ ಕೊಲೆ, ಅತ್ಯಾಚಾರ, ಅಪಹರಣ, ಡಕಾಯಿತಿ ಇತ್ಯಾದಿ ಸೇರಿದಂತೆ ಒಟ್ಟು 42,388 ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 8.923 ಪ್ರಕರಣಗಳು ದಾಖಲಾಗಿದ್ದರೆ ಮಹಾರಾಷ್ಟ್ರದಲ್ಲಿ 7,358, ಮಧ್ಯಪ್ರದೇಶದಲ್ಲಿ 5,082 ಪ್ರಕರಣಗಳು ದಾಖಲಾಗಿವೆ. ಇದೆಲ್ಲವನ್ನೂ ನೋಡಿದಾಗ ಜಗತ್ತಿನ ಮೂರನೇ ಅತಿ ದೊಡ್ಡ ರೈಲ್ವೆ ನೆಟ್‌ವರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ರೈಲ್ವೆ, ಸುರಕ್ಷತೆ, ಸೇವೆ ಮತ್ತು ಸಮಯ ಪಾಲನೆಯಲ್ಲಿ ಇನ್ನೂ ತುಂಬಾ ದೂರ ಸಾಗಬೇಕು ಅನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಹೀಗಾಗಿ, ‘ರೈಲ್ ಬಡೇ, ದೇಶ್ ಬಡೇ’ ಅನ್ನುವ ಸ್ಲೋಗನ್ ಹುಟ್ಟುಹಾಕುವುದಕ್ಕಿಂತ ಹೆಚ್ಚಿನದಾಗಿ, ರೈಲು ವ್ಯವಸ್ಥೆಯ ಸರ್ವಾಂಗೀಣ ಸುಧಾರಣೆಯತ್ತ, ಮೋದಿ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಾಗಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ